ಕೋವಿಡ್ 19ಗೆ ಮಹಿಳಾ ವಿವಿ ಸಿಬ್ಬಂದಿ ಸಾವು.. ಆತಂಕದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ

399

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಇದೀಗ ಕರೋನಾ ಆತಂಕ ಶುರುವಾಗಿದೆ. ಯಾಕಂದ್ರೆ, ಅಕ್ಕಮಹಾದೇವಿ ಮಹಿಳಾ ವಿವಿಯ ಶೈಕ್ಷಣಿಕ ವಿಭಾಗದ ಅಟೆಂಡರ್ ಕೋವಿಡ್ 19ಗೆ ಬಲಿಯಾಗಿದ್ದಾರೆ.

52 ವರ್ಷದ ಅಟೆಂಡರ್ ರೋಗಿ ಸಂಖ್ಯೆ 14,497 ವ್ಯಕ್ತಿ ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್, ಬಿಪಿಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತನ ಸಾವಿನಿಂದಾಗಿ ವಿವಿ ಸಿಬ್ಬಂದಿಗೆ ಕರೋನಾ ಆತಂಕ ಶುರುವಾಗಿದೆ.

ಇನ್ನು ಶೈಕ್ಷಣಿಕ ವಿಭಾಗದಲ್ಲಿ ಕೆಲಸ ಮಾಡ್ತಿದ್ದ 12 ಜನ ಸಿಬ್ಬಂದಿಯನ್ನ ಹೋಂ ಕ್ವಾರಂಟೈನ್ ಮಾಡಲಾಗಿದ್ದು, 200 ಕ್ಕೂ ಅಧಿಕ ಸಿಬ್ಬಂದಿ ಆತಂಕದಲ್ಲಿದ್ದಾರೆ. ವಿಶ್ವ ವಿದ್ಯಾಲಯದಲ್ಲಿ ಈಗಾಗಲೇ ಸ್ಯಾನಿಟೈಜರ್ ಮಾಡಲಾಗಿದೆ ಎಂದು ಅಕ್ಕಮಹಾದೇವಿ ವಿವಿ ಪ್ರಭಾರಿ ಕುಲಪತಿ ಓಂಕಾರ ಕಾಕಡೆ ಮಾಹಿತಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!