ಡಿಆರ್ ಡಿಒ ಸಿದ್ಧಪಡಿಸಿದ 2ಡಯಾಕ್ಸಿ-ಡಿ ಗ್ಲೂಕೋಸ್ ಔಷಧಿ ಬಿಡುಗಡೆ

216

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕನ್ನ ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿದೆ. ಲಸಿಕೆ ನೀಡ್ತಿದ್ರೂ ಸೋಂಕಿತರ ಪ್ರಮಾಣ ಕಡಿಮೆಯಾಗ್ತಿಲ್ಲ. ಇದನ್ನ ಅರಿತ ಡಿಆರ್ ಡಿಒ 2ಡಯಾಕ್ಸಿ-ಡಿ ಗ್ಲೂಕೋಸ್ ತಯಾರಿಸಿದೆ. ಇದು ಕರೋನಾ ರೋಗಿಗಳಿಗೆ ಸಹಾಯ ಮಾಡಲಿದೆ ಎಂದು ಹೇಳಲಾಗ್ತಿದೆ.

ಈ ಔಷಧಿಯನ್ನ ಕೇಂದ್ರ ರಕ್ಷಣ ಸಚಿವ ರಾಜನಾಥ ಸಿಂಗ್ ಹಾಗೂ ಆರೋಗ್ಯ ಸಚಿವ ಡಾ.ಹರ್ಷವರ್ಧನ ಸೋಮವಾರ ಬಿಡುಗಡೆ ಮಾಡಿದ್ರು. ಕೋವಿಡ್ ನಿಂದ ಚೇತರಿಸಿಕೊಳ್ಳಲು ಹಾಗೂ ಆಕ್ಸಿಜನ್ ಮೇಲೆ ಹೆಚ್ಚು ಅವಲಂಬನೆಯಾಗದಂತೆ ಇದು ನೋಡಿಕೊಳ್ಳುತ್ತೆ ಎಂದು ಸಚಿವರು ತಿಳಿಸಿದ್ದಾರೆ.

2ಡಯಾಕ್ಸಿ-ಡಿ ಗ್ಲೂಕೋಸ್ ನಿಂದಾಗಿ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ವೈದ್ಯರು ತಿಳಿಸಿದ್ದಾರೆ. ಶೀಘ್ರದಲ್ಲಿ ಎಲ್ಲ ರಾಜ್ಯಗಳಿಗೂ ಅದು ವಿತರಣೆಯಾಗಲಿದೆಯಂತೆ.




Leave a Reply

Your email address will not be published. Required fields are marked *

error: Content is protected !!