ನಮ್ಮನ್ನ ಶೂಟ್ ಮಾಡ್ತೀರಾ ಎಂದು ಕೇಳಿದ ಮಗು

315

ಪ್ರಜಾಸ್ತ್ರ ಸುದ್ದಿ

ನ್ಯೂಯಾರ್ಕ್: ಅಮೆರಿಕಾದಲ್ಲಿ ಜನಾಂಗೀಯ ಹಲ್ಲೆಯ ಕಾವು ಜೋರಾಗಿದೆ. ಜಾರ್ಜ್ ಫಾಯ್ಡ್ ಸಾವಿಗೆ ವ್ಯಾಪಕ ವಿರೋಧ ವ್ಯಕ್ತವಾಗಿ, ದೊಡ್ಡಣ್ಣನ ನೆಲ ರಣಾಂಗಣವಾಗಿ ಬದಲಾಗಿತ್ತು. ಆದ್ರೆ, ಪ್ರತಿಭಟನೆ ಮುಂದುವರೆದಿದೆ.

ಪ್ರತಿಭಟನೆ ವೇಳೆ 5 ವರ್ಷದ ಪುಟ್ಟ ಬಾಲಕಿ, ಪೊಲೀಸ್ ಅಧಿಕಾರಿಗೆ ನೀವು ನಮ್ಮನ್ನ ಶೂಟ್ ಮಾಡ್ತೀರಾ ಎಂದು ಮುಗ್ಧವಾಗಿ ಪ್ರಶ್ನೆ ಮಾಡ್ತಾಳೆ. ಆಗ ಪೊಲೀಸ್ ಅಧಿಕಾರಿ, ಇಲ್ಲ ಮಗು. ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ನೀವು ಪ್ರತಿಭಟನೆ ಮಾಡಿ. ಜನರನ್ನ ಸೇರಿಸು. ಆದ್ರೆ, ಸಾರ್ವಜನಿಕ ವಸ್ತುಗಳನ್ನ ಹಾಳು ಮಾಡಬೇಡ ಎಂದಿದ್ದಾರೆ.

https://twitter.com/iamsimeonb/status/1268214300096765954?s=20

ಬಾಲಕಿ ಹಾಗೂ ಪೊಲೀಸ್ ಅಧಿಕಾರಿ ನಡುವಿನ ಮಾತನ್ನ ಆಕೆ ತಂದೆ ವಿಡಿಯೋ ಮಾಡಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಇದೀಗ ಸಾಕಷ್ಟು ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!