ಕಾಯ್ದೆ 370 ರದ್ದತಿಗೆ ಒಂದು ವರ್ಷ

357

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಾಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಕಾಯ್ದೆ 370 ಹಾಗೂ 35ಎ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದ ದಿನಕ್ಕೆ ಇದೀಗ ಒಂದು ವರ್ಷ ಕಂಪ್ಲೀಟ್ ಆಗಿದೆ. ಆಗಸ್ಟ್ 5, 2019ರಲ್ಲಿ ಈ ಎರಡು ಕಾಯ್ದೆಗಳನ್ನ ರದ್ದುಗೊಳಿಸಲಾಯ್ತು.

ದಶಕಗಳಿಂದ ಪ್ರತ್ಯೇಕವಾದಿಗಳಿಗೆ ರಾಜಕೀಯ ಲಾಭಕ್ಕೆ, ಭಯೋತ್ಪಾದಕರಿಗೆ ಇದೊಂದು ರೀತಿಯಲ್ಲಿ ಆಶ್ರಯವಾಗಿತ್ತು. ಸಾಕಷ್ಟು ಪರ ವಿರೋಧಗಳ ನಡುವೆ ಕಣಿವೆ ನಾಡಿಗೆ ನೀಡಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಲಾಯ್ತು. ಬಳಿಕ ಲಡಾಖ್ ಹಾಗೂ  ಜಮ್ಮು ಕಾಶ್ಮೀರ ಅನ್ನೋ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಲಾಯ್ತು.

ಕೇಂದ್ರದ ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಹಿಂದಿನ ಪ್ರಣಾಳಿಕೆಯಲ್ಲಿದ್ದ ಆರ್ಟಿಕಲ್ 370 ಹಾಗೂ 35ಎ ರದ್ದುಗೊಳಿಸವ ಆಶ್ವಾಸನೆ ಪೂರ್ಣಗೊಳಿಸಿತು. ಇಲ್ಲಿನ ಜನಕ್ಕೆ ಉದ್ಯೋಗ, ಶಿಕ್ಷಣ ನೀಡುವ ಭರವಸೆಯನ್ನ ನೀಡಲಾಗಿದ್ದು, ಅದನ್ನ ನೀಡುವ ಕೆಲಸ ಮಾಡಬೇಕಿದೆ. ಈ ಕಾರಣಕ್ಕೆ ಆಗಸ್ಟ್ 5 ವಿಶೇಷವಾಗಿದೆ.




Leave a Reply

Your email address will not be published. Required fields are marked *

error: Content is protected !!