ಏಷ್ಯ ಕಪ್ 2022: ಶ್ರೀಲಂಕಾ ಇನ್.. ಬಾಂಗ್ಲಾ ಔಟ್..

264

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ 2022 ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್ ಗಳಿಂದ ಮಣಿಸಿ ಸೂಪರ್ ಫೋರ್ ಹಂತ ತಲುಪಿದೆ. ಈ ಸೋಲಿನೊಂದಿಗೆ ಬಾಂಗ್ಲಾ ಟೂರ್ನಿಯಿಂದ ಹೊರ ಬಿದ್ದಿದೆ. ಬಿ ಗುಂಪಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಬಾಂಗ್ಲಾ ಸೋತಿದೆ.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಟೀಂ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಗಳನ್ನು ಕಲೆ ಹಾಕಿತು. ಹಸನ್ ಮಿರಾಜ್ 38, ನಾಯಕ ಶಕೀಬ್ ಅಲ್ ಹಸನ್ 24, ಹುಸೇನ್ 39, ಮೆಹಮೂದುಲ್ಲಾ 27, ಮೂಸಾದಿಕ್ ಹುಸೇನ್ ಅಜೆಯ 24 ರನ್ ಗಳಿಂದ ಸವಾಲಿನ 183 ರನ್ ನೀಡಿತು.

ಶ್ರೀಲಂಕಾ ಪರ ಹಸರಂಗಾ 2, ಕರುಣಾರತ್ನೆ 2, ಫರ್ನಾಂಡೋ ಹಾಗೂ ಮಧುಸಂಕಾ ತಲಾ 1 ವಿಕೆಟ್ ಪಡೆದರು. 183 ಸ್ಕೋರ್ ಬೆನ್ನು ಹತ್ತಿದ ಲಂಕಾ ಪಡೆ, ಮೆಂಡಿಸ್ 60, ನಾಯಕ ದುಸುನ್ ಸನಕ್ 45 ರನ್ ಗಳ ಆಟದಿಂದಾಗಿ 19.2 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ಬಾಂಗ್ಲಾ ಪರ ತಸ್ಕಿನ್ ಅಹ್ಮೀದ್ 2, ಇಬಾದತ್ ಹುಸೇನ್ 3, ರೆಹಮಾನ್ ಹಾಗೂ ಮೆಹಿದ್ ಹಸನ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!