ಬ್ರೇಕಿಂಗ್ ನ್ಯೂಸ್
Search

ದಿನೇಶ್ ಕಾರ್ತಿಕ್ ಕೈ ಬಿಟ್ಟಿದ್ದಕ್ಕೆ ಸೆಹ್ವಾಗ್ ಕಿಡಿ

189

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯಾ ಕಪ್ ನ ಸೂಪರ್ ಫೋರ್ ಹಂತದಲ್ಲಿ ಭಾರತ ಸತತ ಎರಡು ಪಂದ್ಯಗಳನ್ನು ಸೋತು, ಬುಧವಾರ ನಡೆಯುವ ಪಾಕ್-ಅಫ್ಗನ್ ಪಂದ್ಯದ ಫಲಿತಾಂಶ ಎದುರು ನೋಡುವಂತಾಗಿದೆ. ಹೀಗಾಗಿ ಕ್ರೀಡಾಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟ್ ಆಟಗಾರರು ಕಿಡಿ ಕಾರುತ್ತಿದ್ದಾರೆ.

ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಮಿನಲ್ಲಿ ಕುಳಿತು ತಂಡ ಗೆಲ್ಲಿಸಿ ಕೊಡಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ದೀಪಕ್ ಹೂಡಾ ಆಯ್ಕೆಗಾಗಿ ದಿನೇಶ್ ಕಾರ್ತಿಕ್ ಕೈ ಬಿಟ್ಟಿದ್ದಕ್ಕೆ ಕಿಡಿ ಕಾರಿದ್ದಾರೆ. ಭಾರತ ಮೊದಲ ಬೌಲರ್ ಗಳ ಸಮಸ್ಯೆ ಎದುರಿಸುತ್ತಿದೆ. ಹೀಗಿರುವಾಗ ಒಳ್ಳೆಯ ಫಿನಿಷರ್ ಬೇಕು ಅನ್ನೋ ಕಾರಣಕ್ಕೆ 37 ವರ್ಷದ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಆದರೆ, ಅವರಿಗೆ ಆಡಲು ಅವಕಾಶ ನೀಡದೆ ಹೋದರೆ ಹೇಗೆ ಎಂದಿದ್ದಾರೆ.

ಬೌಲಿಂಗ್ ಸಹ ಮಾಡಬೇಕು ಅನ್ನೋ ಕಾರಣಕ್ಕೆ ದೀಪಕ್ ಹೂಡಾ ಆಯ್ಕೆ ಮಾಡುವುದಾದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಹ ಎರಡು ಓವರ್ ಬೌಲಿಂಗ್ ಮಾಡಬಹುದು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 190 ರನ್ ಗಳಿಸುವ ಹಂತದಲ್ಲಿ ಇದ್ದೆವು. ಆದರೆ, 170 ಗಳಿಸಿದೆವು. ಹೂಡಾ ಬದಲಿ ದಿನೇಶ್ ಕಾರ್ತಿಕ್ ಇದ್ದರೆ ಹೆಚ್ಚು ರನ್ ಗಳಿಸುತ್ತಿತ್ತು ಎಂದು ಸೆಹ್ವಾಗ್, ಟೀಂ ಇಂಡಿಯಾದ 11 ಆಟಗಾರರ ತಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!