6ನೇ ಬಾರಿ ಶ್ರೀಲಂಕಾ ಏಷ್ಯ ಚಾಂಪಿಯನ್ಸ್

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯ ಚಾಂಪಿಯನ್ಸ್ ಟ್ರೂಫಿಯ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಶ್ರೀಲಂಕಾ ಗೆಲ್ಲುವ ಮೂಲಕ 6ನೇ ಬಾರಿಗೆ ಚಾಂಪಿಯನ್ಸ್ ಆಗಿದೆ. ಟಿ-20 ಟೂರ್ನಿಯಲ್ಲಿ 23 ರನ್ ಗಳಿಂದ ಪಾಕ್ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ದುಸುನ್ ಶನಕ್ ನಾಯಕತ್ವದ ಲಂಕಾ ಪಡೆ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. 5ನೇ ಕ್ರಮಾಂಕದಲ್ಲಿ ಬಂದ ಭಾನುಕಾ ಅಜೇಯ 71 ರನ್ ಗಳಿಸಿದ್ದು ಗೆಲುವಿಗೆ ಕಾರಣವಾಯಿತು. ಪಾಕ್ ಪರ ಹ್ಯಾರಿಸ್ ರವೂಫ್ 29ಕ್ಕೆ 3, ಇಫ್ತಿಕಾರ್ ಅಹ್ಮದ್ 21ಕ್ಕೆ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಪಾಕ್ 20 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ರಿಜ್ವಾನ್ 55, ಇಫ್ತಿಕಾರ್ 32 ರನ್ ಗರಿಷ್ಠವಾಗಿದೆ. ಲಂಕಾ ಬೌಲರ್ ಗಳಾದ ಮಧುಶನ್ 34ಕ್ಕೆ 4, ಮಣಿಂದು ಹರಸಂಗ್ 27ಕ್ಕೆ 3 ವಿಕೆಟ್ ಕಿತ್ತು ಲಂಕಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.




Leave a Reply

Your email address will not be published. Required fields are marked *

error: Content is protected !!