ಭಾರತ ಗೆಲುವಿಗೆ 48 ರನ್.. ಅಶ್ವಿನ್ 400 ವಿಕೆಟ್ ಗಳ ಸರದಾರ

256

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು 2ನೇ ಇನ್ನಿಂಗ್ಸ್ ನಲ್ಲಿ ಮಕಾಡೆ ಮಲಗಿದ್ರು. ಅಕ್ಷರ ಪಟೇಲ್ ಮತ್ತೆ 5 ವಿಕೆಟ್ ಪಡೆಯುವ ಮೂಲಕ ರೂಟ್ ಪಡೆಯನ್ನ 81 ರನ್ ಗಳಿಗೆ ಕಟ್ಟಿ ಹಾಕಿದ್ರು.

ಯೆಸ್, ಅಕ್ಷರ ಪಟೇಲ್ 5, ಅಶ್ವಿನ್ 4 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವು ಪಕ್ಕಾ ಮಾಡಿದ್ದಾರೆ. ವಾಸಿಂಗ್ಟನ್ ಸುಂದರ್ 1 ವಿಕೆಟ್ ಪಡೆದಿದ್ದಾನೆ.

ಇಂಗ್ಲೆಂಡ್ ತಂಡ ನೀಡಿದ 112 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಸಹ ಜಸ್ಟ್ 145 ರನ್ ಗಳಿಗೆ ಆಲೌಟ್ ಆಯ್ತು. ಜೋ ರೂಟ್ 5, ಲೀಚ್ 4 ವಿಕೆಟ್ ಗಳನ್ನ ಪಡೆದು ಕೊಹ್ಲಿ ಪಡೆಯನ್ನ ಅಲ್ಪ ರನ್ ಗಳಿಗೆ ಕಟ್ಟಿ ಹಾಕಿದ್ರು. ಹೀಗಾಗಿ ಕೇವಲ 33 ರನ್ ಲೀಡ್ ಗಳಿಸಿತು.

2ನೇ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಟೀಂನಲ್ಲಿ ಕ್ರೌವ್ಲಿ 0, ಸಿಬ್ಲಿ 7, ಬ್ರೆಸ್ಟೋ 0, ರೂಟ್ 19, ಸ್ಟೋಕ್ಸ್ 25, ಪೋಪ್ 12, ಫೋಕ್ಸ್ 8, ಅರ್ಚರ್ 0, ಲೀಚ್ 9, ಆಂಡ್ರಸನ್ 0 ರನ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಹೀಗಾಗಿ ಕೇವಲ 81 ರನ್ ಗಳಿಗೆ ಆಲೌಟ್ ಆಯ್ತು. ಒಂದೇ ದಿನದಲ್ಲಿ ಎರಡು ಕಡೆ ಆಲೌಟ್ ಆಗುವ ಮೂಲಕ ಬೌಲರ್ ಗಳ ಪರಾಕ್ರಮ ತೋರಿತು. 2ನೇ ಇನ್ನಿಂಗ್ಸ್ ಆಡ್ತಿರುವ ಭಾರತ 0 ವಿಕೆಟ್ ಗೆ 11 ರನ್ ಗಳಿಸಿದ್ದು ಇನ್ನು 38 ರನ್ ಗಳಿಸಿದ್ರೆ ಗೆಲುವು ದಾಖಲಿಸಲಿದೆ.

ಅಶ್ವಿನ್ 400 ವಿಕೆಟ್ ಗಳ ಸರದಾರ

ಇನ್ನು ಟೀಂ ಇಂಡಿಯಾ ಆಫ್ ಸ್ಪೀನ್ನರ್ ರವಿಚಂದ್ರನ್ ಅಶ್ವಿನ್ 400 ವಿಕೆಟ್ ಕ್ಲಬ್ ಸೇರಿದ್ರು. ಇದರೊಂದಿಗೆ ಮುತ್ತಯ್ಯ ಮುರಿಧರ್ ಬಳಿಕ ವೇಗವಾಗಿ 400 ವಿಕೆಟ್ ಗಳಿಸಿದ ವಿಶ್ವದ 2ನೇ ಬೌಲರ್ ಆದ್ರು. 77ನೇ ಟೆಸ್ಟ್ ಪಂದ್ಯದ 144ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ರು.

ಅನಿಲ್ ಕುಂಬ್ಳೆ 619, ಕಪಿಲ್ ದೇವ್ 434, ಹರಭಜನ್ ಸಿಂಗ್ 417 ವಿಕೆಟ್ ಪಡೆದು ಕ್ರಮವಾಗಿ ಮೊದಲ 3 ಸ್ಥಾನದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!