ಮೀನು ಹಿಡಿಯಲು ಬಂದವನ ಮೇಲೆ ಫೈರಿಂಗ್: ಇಬ್ಬರ ಬಂಧನ

50

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಮೀನು ಹಿಡಿಯಲು ಹೋಗಿದ್ದವನು ಮೇಲೆ ಫೈರಿಂಗ್ ನಡೆಸಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ನಾಗರಾಜ್ ಹಾಗೂ ಅನಿಲ್ ಬಂಧಿತ ಆರೋಪಿಗಳು. ಅಕ್ರಮ ಮರಳು ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 30ರಂದು ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ನನ್ನ ಬಂಧನಕ್ಕೆ ಕಾರಣ ತನ್ನೂರಿನ ನಾಗರಾಜನೆ ಕಾರಣವೆಂದು ನವೀನ್ ಅವನೊಂದಿಗೆ ಪದೆಪದೆ ಜಗಳ ತೆಗೆಯುತ್ತಿದ್ದನಂತೆ. ವಿಕಲಚೇತನನಾಗಿರುವ ನಾಗರಾಜನಿಗೆ ಇನ್ನೊಂದು ಕಾಲು ಮುರಿಯುತ್ತೇನೆ ಎಂದು ಆವಾಜ್ ಹಾಕಿದ್ದನಂತೆ. ಇದರಿಂದ ನವೀನ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತಂತೆ.

ನಾಗರಾಜ್ ನವೀನ್ ಗೆ ಫೋನ್ ಮಾಡಿದ್ದಾನೆ. ಆಗ ಅವನು ಮೀನು ಹಿಡಿಯಲು ಹೋಗಿದ್ದ. ಅಲ್ಲಿಗೆ ಹೋದ ನಾಗರಾಜ್ ಹಾಗೂ ಅನಿಲ್, ಆತನ ಮೇಲೆ ಪೆಲ್ಲೆಟ್ ಗನ್ ನಿಂದ ಶೂಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Leave a Reply

Your email address will not be published. Required fields are marked *

error: Content is protected !!