ಜಗತ್ತಿಗೆ ಈಗ ಬುದ್ಧ ಮಾರ್ಗ ಅನಿವಾರ್ಯ: ಅಂಶಿ ಪ್ರಸನ್ನ ಕುಮಾರ್

488

ಪ್ರಜಾಸ್ತ್ರ ಸುದ್ದಿ

ಮೈಸೂರು: ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ತನುಮನ ಸಂಸ್ಥೆ ಆಯೋಜಿಸಿದ್ದ ಜಗ ನಡೆಯಲಿ ಬುದ್ಧನ ಕಡೆ ಕಾರ್ಯಕ್ರಮ  ಉದ್ಘಾಟನೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಬುದ್ಧ ಹಿಂದಿಗಿಂತಲೂ ಈಗ ಅನಿವಾರ್ಯ ಆಗಿದ್ದಾನೆ. ವಿನಾಶದ ಅಂಚಿನಿಂದ ಮಾನವ ಉಳಿಯಲು ಬುದ್ಧ ಮಾತ್ರ ಸಂಜೀವಿನಿ ಎಂದರು. ಗಾಯಕ ಲಕ್ಷ್ಮಿರಾಮ್ ಪ್ರತಿ ತಿಂಗಳು ಹುಣ್ಣಿಮೆಯಲ್ಲಿ ಮಾಡುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾದ ಡಿ.ಚಂದ್ರಶೇಖರಯ್ಯ ಮಾತನಾಡಿ, ತಳ ಸಮುದಾಯದ ನೌಕರರು ಅಂಬೇಡ್ಕರ್ ಹಾದಿಯಲ್ಲಿ ಸಾಗಬೇಕು ಎಂದರು. ಕವಿ ಕೆ.ಸೋಮಯ್ಯ ಮಾತನಾಡಿ, ಸಾಹಿತ್ಯ ಸಂಗೀತಗಳಲ್ಲಿ ಬುದ್ಧನ ಕಟ್ಟಿಕೊಳ್ಳುವ ಕಾರ್ಯ ವಿಶೇಷ. ಒಬ್ಬ ಬರಹಗಾರ ಸೃಜನಶೀಲ ಚಿಂತಕ ಆಗಲು ಬುದ್ಧ ಮತ್ತು ಅಂಬೇಡ್ಕರ್ ರ ಓದು ಅವಶ್ಯ ಎಂದರು.

ಯೆಪಿಯೆಮ್ಸಿ ಮಾಜಿ ಉಪಾಧ್ಯಕ್ಷ ಚಿಕ್ಕ ಜವರಪ್ಪ ಮಾತನಾಡಿದರು. ಖ್ಯಾತ ಗಾಯಕ ಲಕ್ಷ್ಮಿರಾಮ್ ಮತ್ತು ತಂಡದ ಮಾದೇಶ್ ಚಿಕ್ಕ ನಂದಿ, ಗಣೇಶ್ ಮಲಾರ, ರಮೇಶ್ ತಾಯುರ್, ಪ್ರೇಮ ಕುಮಾರಿ, ಪದ್ಮಾವತಿ ವಿವಿಧ ಬುದ್ಧನ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಡಿ.ಸಿ ಶಿವಕುಮಾರ್, ರೋಷನ್ ಸೂರ್ಯ, ರಿಚರ್ಡ್ ವಾದ್ಯ ಸಹಕಾರ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪರಿವಿಕ್ಶಾಕಾಧಿಕಾರಿ ಚಂದ್ರಕಲಾ, ವಕೀಲ ಎಸ್. ಉಮೇಶ್ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!