ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಪತಿಯಿಂದ ಹಲ್ಲೆ

208

ಪ್ರಜಾಸ್ತ್ರ ಸುದ್ದಿ

ಬೈಲಹೊಂಗಲ: ಕೋರ್ಟ್ ಆವರಣದಲ್ಲಿಯೇ ಪತ್ನಿಯ ಮೇಲೆ ಪತಿ ಹಲ್ಲೆ ಮಾಡಿರುವ ಘಟನೆ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದಿದೆ. ನಿವೃತ್ತ ಸೈನಿಕ ಶಿವಪ್ಪ ಅಡಕಿ ಎಂಬಾತ ಪತ್ನಿ ಜಯಮಾಲಾ ಮೇಲೆ ಹಲ್ಲೆ ಮಾಡಿದ್ದಾನೆ.

ಕೌಟುಂಬಿಕ ಕಲಹದ ಪ್ರಕರಣ ಕೋರ್ಟ್ ಮೆಟ್ಟಿಲು ಏರಿತ್ತು. ಶಿವಪ್ಪ ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದಲ್ಲಿ ವಾಸವಾಗಿದ್ದಾನೆ. ಪತ್ನಿ ಜಯಮಾಲಾ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ಮಗಳ ಜೊತೆ ವಾಸವಾಗಿದ್ದಾಳೆ. ವಿಚಾರಣೆ ಸಂಬಂಧ ಕೋರ್ಟ್ ಗೆ ಬಂದಾಗ ಹಲ್ಲೆ ನಡೆಸಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!