ನಿವೃತ್ತಿ ವಾಪಸ್ ಪಡೆದು ಟೆಸ್ಟ್ ಗೆ ಬಂದ ಮೊಯಿನ್ ಗೆ ದಂಡ

164

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ದ ಆಲ್ ರೌಂಡರ್ ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್ ಆಟಕ್ಕೆ 2021ರಲ್ಲಿ ನಿವೃತ್ತಿ ಘೋಷಿಸಿದ್ದರು. ಇದೀಗ ಅದನ್ನು ವಾಪಸ್ ಪಡೆದು ಮರಳಿ ತಂಡ ಸೇರಿದ್ದು, ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಎಡ್ಜ್ ಬಾಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಡೆಯುತ್ತಿದೆ. ಬ್ಯಾಟಿಂಗ್ ನಲ್ಲಿ ವಿಫಲರಾದ ಮೊಯಿನ್ ಅಲಿ ಬೌಲಿಂಗ್ ನಲ್ಲಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಸ್ಕೋರ್ ಬೆನ್ನು ಹತ್ತಿದ ಆಸೀಸ್ ಪಡೆ 386 ರನ್ ಗಳಿಗೆ ಆಲೌಟ್ ಆಗಿ 7 ರನ್ ಗಳ ಹಿನ್ನಡೆ ಅನುಭವಿಸಿತು.

33 ಓವರ್ ಮಾಡಿರುವ ಮೊಯಿನ್ ಅಲಿ 147 ರನ್ ನೀಡಿ 2 ವಿಕೆಟ್ ಪಡೆದರು. ಸ್ಟುವರ್ಟ್ ಬಾರ್ಡ್ 3, ರಾಬಿನ್ ಸನ್ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಟೆಸ್ಟ್ ಗೆ ವಾಪಸ್ ಬಂದಿರುವ ಮೊಯಿನ್ ಅಲಿ ಬೌಲಿಂಗ್ ಮಾಡುವ ಕೈಗೆ ಡ್ರೈಯಿಂಗ್ ಏಜೆಂಟ್ ಬಳಸಿರುವುದಕ್ಕೆ ಐಸಿಸಿ ದಂಡ ವಿಧಿಸಿದೆ. ಐಸಿಸಿ ಆಟಗಾರರ ಹಾಗೂ ಆಟಗಾರರ ಸಿಬ್ಬಂದಿ ನೀತಿ ಸಂಹಿತೆ ಆರ್ಟಿಕಲ್ 2.20 ನಿಯಮ ಉಲ್ಲಂಘನೆ ಅಡಿಯಲ್ಲಿ ದಂಡ ವಿಧಿಸಿದೆ.




Leave a Reply

Your email address will not be published. Required fields are marked *

error: Content is protected !!