ಆಸ್ಟ್ರೇಲಿಯಾ ಕಾಡ್ಗಿಚ್ಚು ಬ್ರೆಜಿಲ್ ಕಡೆ

348

ಅಂತಾರಾಷ್ಟ್ರೀಯ ಸುದ್ದಿ:

ಇಡೀ ವಿಶ್ವವನ್ನ ಬೆಚ್ಚಿ ಬೀಳಿಸಿರುವ ಆಸ್ಟ್ರೇಲಿಯಾದ ಕಾಡ್ಗಿಚ್ಚು ಇದೀಗ ದಕ್ಷಿಣ ಬ್ರೆಜಿಲ್ ಕಡೆ ಮುಖಮಾಡಿದೆ. ಭೀಕರ ಬೆಂಕಿ ಬ್ರೆಜಿಲ್ ಕಡೆ ವ್ಯಾಪಿಸ್ತಿದೆ ಎಂದು ಮೆಟ್ಸುಲ್ ಹವಾಮಾನ ಸಂಸ್ಥೆ ಹೇಳಿದೆ. ಹೊಗೆ ರಿಯೊ ಗ್ರಾಂಡೆ ಡೊ ಸುಲೆ ವಾಯುವ್ಯಕ್ಕೆ ಬೆಂಕಿ ಆವರಿಸಿಕೊಳ್ತಿದೆ ಎಂದು ವರದಿಯಾಗಿದೆ.

ಈಗಾಗ್ಲೇ ಆಸ್ಟ್ರೇಲಿಯಾ ಬೆಂಕಿ ಆರಿಸಲು 2 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಹವಾಮಾನ ವೈಪರಿತ್ಯದಿಂದ ಆಸೀಸ್ ನೆಲ ಸಂಪೂರ್ಣವಾಗಿ ಅಗ್ನಿಕುಂಡವಾಗಿದೆ. ಈಗಾಗ್ಲೇ ಬರೋಬ್ಬರಿ 4.8 ಕೋಟಿ ಪ್ರಾಣಿಗಳು ಅಸುನೀಗಿವೆ. 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಾಡಂಚಿನಲ್ಲಿ ವಾಸಿಸ್ತಿದ್ದ ಎರಡು ಸಾವಿರಕ್ಕೂ ಅಧಿಕ ಮನೆಗಳಲ್ಲಿನ ಜನರನ್ನ ಸ್ಥಳಾಂತರಿಸಲಾಗಿದೆ.

ಇದೀಗ ದಕ್ಷಿಣ ಬ್ರೆಜಿಲ್ ಭಾಗದ ಜನತೆ ಅಗ್ನಿ ಅನಾಹುತಕ್ಕೆ ಕಂಗಾಲಾಗ್ತಿದ್ದಾರೆ. ಆಸ್ಟ್ರೇಲಿಯಾದ ಅನಾಹುತಕ್ಕೆ ಇಡೀ ದೇಶದ ಜನತೆ ಮರುಗಿದೆ. ಕೋಟಿ ಕೋಟಿ ಮುಖ ಪ್ರಾಣಿಗಳ ಮಾರಣಹೋಮಕ್ಕೆ ಮರುಗಿದ್ದಾರೆ. ಇದೀಗ ಬ್ರೆಜಿಲ್ ಕಡೆ ಎನ್ನುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬೆಂಕಿ ತಣ್ಣಗಾಗುವಂತೆ ದೇವರಲ್ಲಿ ಬೇಡಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!