ಅಲ್ಲಿ ಸಾವನ್ನಪ್ಪಿದವರಿಗೆ ಗೌರವದ ವಿದಾಯ.. ಇದನ್ನ ಕಲಿಯಬೇಕಿದೆ ಭಾರತ!

326

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಮನೌಸ್: ಇಡೀ ವಿಶ್ವದಲ್ಲಿ ಕರೋನಾ ಹಾವಳಿ ಜೋರಾಗಿದೆ. ಸೋಂಕಿತರ ಜೊತೆಗೆ ಸಾವು ನೋವು ಸಹ ಮುಂದುವರೆದಿದೆ. ವಿಶ್ವದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿ. ಭಾರತ ಮೂರನೇ ಸ್ಥಾನದಲ್ಲಿದೆ.

ಅಮೆರಿಕದಲ್ಲಿ 6,001,103 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 1,83,677 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ 37,22,004 ಜನರಲ್ಲಿ ಸೋಂಕು. 1,17,756 ಜನರು ಸಾವನ್ನಪ್ಪಿದ್ದಾರೆ. 3ನೇ ಸ್ಥಾನದಲ್ಲಿರುವ ಭಾರತದಲ್ಲಿ 33,14,953 ಜನರಲ್ಲಿ ಸೋಂಕು ದೃಢಪಟ್ಟಿದೆ. 60,652 ಜನರು ಸಾವನ್ನಪ್ಪಿದ್ದಾರೆ. ನಮ್ಮಲ್ಲಿ ಸೋಂಕಿತರನ್ನ ನೋಡುವ ದೃಷ್ಟಿ, ಅವರ ಜೊತೆ ವರ್ತಿಸುವ ರೀತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ಈ ಸೋಂಕು ಮೊದ್ಲೇ ಮನುಷ್ಯತ್ವ ಕಳೆದುಕೊಂಡ ಜನರಲ್ಲಿ ಮತ್ತಷ್ಟು ಮನುಷ್ಯತ್ವ ಕಳೆಯುವಂತೆ ಮಾಡಿದೆ.

ಬ್ರೆಜಿಲ್ ನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನ ಎಷ್ಟೊಂದು ಗೌರವದಿಂದ ಅಂತ್ಯಸಂಸ್ಕಾರ ಮಾಡಲಾಗುತ್ತೆ ಅನ್ನೋದಕ್ಕೆ ಇಲ್ಲಿನ ಫೋಟೋಗಳು ಸಾಕ್ಷಿ. ತುಂಬಾ ವ್ಯವಸ್ಥಿತವಾಗಿ, ಕುಟುಂಬಸ್ಥರೊಂದಿಗೆ ಕೂಡಿಕೊಂಡು ಅಂತ್ಯ ಸಂಸ್ಕಾರ ಮಾಡಲಾಗ್ತಿದೆ. ಒಂದು ನಿರ್ದಿಷ್ಟ ಸ್ಥಳ ಗುರುತಿಸಿ, ಸಾಮೂಹಿಕವಾಗಿ ಅವರನ್ನ ಸಮಾಧಿ ಮಾಡಲಾಗ್ತಿದೆ.

ನಮ್ಮಲ್ಲಿ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದವರನ್ನ ಎಳೆದು ಎಸೆಯಲಾಯ್ತು. ನಡು ರೋಡಿನಲ್ಲಿ ಬಿಟ್ಟು ಓಡಿ ಹೋಗಲಾಯ್ತು. ಲಿಫ್ಟ್ ನಲ್ಲಿಟ್ಟು ಕೈತೊಳೆದುಕೊಳ್ಳಲಾಯ್ತು. ಹೀಗೆ ಅವರವರ ಮನಸ್ಸಿಗೆ ಹೇಗೆ ಬರುತ್ತೋ ಹಾಗೇ ಅಮಾನುಷವಾಗಿ ನಡೆದುಕೊಳ್ತಿದ್ದಾರೆ. ಈ ಬಗ್ಗೆ ಸರ್ಕಾರ ಬರೀ ಟ್ವೀಟರ್ ನಲ್ಲಿ, ಮೀಡಿಯಾ ಮುಂದೆ ಎಚ್ಚರಿಕೆ ನೀಡುವುದು ಮಾಡಿತು ವಿನಃ, ಸೂಕ್ತ ಪರಿಹಾರ ತೆಗೆದುಕೊಳ್ಳುವ ಕೆಲಸ ಮಾಡ್ಲಿಲ್ಲ. ಇಂಥಾ ಪರಿಸ್ಥಿತಿಯಲ್ಲೂ ಬ್ರೆಜಿಲ್ ತನ್ನ ನೆಲದ ಜನರಿಗೆ ಗೌರವಪೂರ್ಣ ವಿದಾಯ ಹೇಳ್ತಿರುವುದು ನಿಜಕ್ಕೂ ಶ್ಲಾಘನೀಯ. ಇದನ್ನ ನೋಡಿ ಭಾರತ ಕಲಿಯಬೇಕಿದೆ.




Leave a Reply

Your email address will not be published. Required fields are marked *

error: Content is protected !!