ವಿಮಾನ ಪತನ 170 ಪ್ರಯಾಣಿಕರ ದುರ್ಮರಣ

358

ಅಂತಾರಾಷ್ಟ್ರೀಯ ಸುದ್ದಿ:

ಟೆಹರಾನ್: ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ವಿಮಾನ ಅಪಾಘತದಲ್ಲಿ ಬರೋಬ್ಬರಿ 170 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇಮಾಮ್ ಬೊಮೈನಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಹೊರಟ ಉಕ್ರೇನ್ ಬೋಯಿಂಗ್ ಪಿಎಸ್-752 ವಿಮಾನ ಪತನಗೊಂಡಿದೆ.

ನಿಲ್ದಾಣದಿಂದ ಮೇಲೆರಿದ ಸ್ವಲ್ಪ ಹೊತ್ತಿನಲ್ಲಿಯೇ ವಾಯುನಿಯಂತ್ರಣ ಹಾಗೂ ರೇಡರ್ ನೊಂದಿಗೆ ಸಂರ್ಪಕ ಕಳೆದುಕೊಂಡಿದೆ. ಇದಾದ ಕೆಲ ಸಮಯದಲ್ಲಿಯೇ ನೈರುತ್ಯ ಭಾಗದಲ್ಲಿ ವಿಮಾನ ಪತನಗೊಂಡಿದೆ. ಇದ್ರಿಂದಾಗಿ ಸಿಬ್ಬಂದಿ ಸೇರಿದಂತೆ 170 ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರೆಡ್ ಕ್ರಸೆಂಟ್ ಸಂಸ್ಥೆ ಖಚಿತಪಡಿಸಿದೆ.




Leave a Reply

Your email address will not be published. Required fields are marked *

error: Content is protected !!