ವಿಡಿಯೋ ಕಾಲ್ ತಂದ ಆಪತ್ತು.. ಬೈಕ್ ಅಪಘಾತಕ್ಕೆ ಮಹಿಳೆ ಸಾವು

391

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ವಿಡಿಯೋ ಕಾಲ್ ನಲ್ಲಿ ಮಾತ್ನಾಡುತ್ತಾ ಬೈಕ್ ಚಲಾಯಿಸುವಾಗ ನಡೆದ ಅನುಹಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಮೂಗನೂರ ಬಳಿ ನಡೆದಿದೆ. 35 ವರ್ಷದ ಪುಷ್ಪಲತಾ ಮೃತ ದುರ್ದೈವಿ.

ದೀಪಾವಳಿ ರಜೆಗೆ ಊರಿಗೆ ಬಂದಿದ್ದ ಯೋಧ ಶೇಖರಯ್ಯ ವಿಭೂತಿ ಎಂಬುವರು ಸೋಮವಾರ ವಾಪಸ್ ಆಗಬೇಕಿತ್ತು. ಹೀಗಾಗಿ ಪತ್ನಿಯನ್ನ ತವರು ಮನೆಗೆ ಬಿಡಲು ಹಿರೆಮಳಗಾವಿ ಗ್ರಾಮಕ್ಕೆ ಬಿಡಲು ಹೊರಟಿದ್ರು. ಈ ವೇಳೆ ಮಗನಿಂದ ವಿಡಿಯೋ ಕಾಲ್ ಬಂದಿದೆ. ಮಗನ ಜೊತೆ ವಿಡಿಯೋ ಕಾಲ್ ನಲ್ಲಿ ಮಾತ್ನಾಡ್ತಿರುವಾಗ ಹಂಪ್ಸ್ ನೋಡದೆ ಇರುವ ಕಾರಣ, ಬೈಕೆ ಮೇಲಕ್ಕೆ ಹಾರಿದೆ. ಆಗ ಹಿಂದೆ ಕುಳಿತಿದ್ದ ಪತ್ನಿ ಹಾರಿ ಬಿದ್ದಿದ್ದಾಳೆ.

ಮಹಿಳೆ ಬಿದ್ದ ವೇಗಕ್ಕೆ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಪತ್ನಿಯ ದುರಂತ ಸಾವಿಗೆ ಪತಿ ಶೇಖರಯ್ಯ ಗೋಳಾಡ್ತಿರುವ ದೃಶ್ಯ ನೋಡಿಗರ ಕಣ್ಣಲ್ಲಿ ನೀರು ತರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಮಿನಗಡ ಪೊಲೀಸರು ಭೇಟಿ ನೀಡಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ರವಾನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!