224-17=207, ಬಿಎಸ್ ವೈ ಸೇಫ್

411

ಬೆಂಗಳೂರು: ಮೈತ್ರಿ ಸರ್ಕಾರದ ಜೊತೆ ಮುನಿಸಿಕೊಂಡು ಮುಂಬೈ ಹೋಟೆಲ್ ಸೇರಿದ್ದ ಶಾಸಕರನ್ನೆಲ್ಲ ಸ್ಪೀಕರ್ ರಮೇಶಕುಮಾರ ಮನೆಗೆ ಕಳುಹಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮೂವರನ್ನ ಅನರ್ಹಗೊಳಿಸಿದ್ದ ಸ್ಪೀಕರ್, ಭಾನುವಾರ 14 ಶಾಸಕರನ್ನ ಅನರ್ಹಗೊಳಿಸುವ ಮೂಲಕ ಎಲ್ಲ 17 ಜನ ಶಾಸಕರಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಇದೀಗ ಅವರು ಸುಪ್ರೀಂ ಕೋರ್ಟ್ ಕದ ತಟ್ಟಲು ರೆಡಿಯಾಗಿದ್ದಾರೆ.

ಆದ್ರೆ, 17 ಜನ ಶಾಸಕರ ಅನರ್ಹತೆಯಿಂದ 224 ಇದ್ದ ಸದನದ ಬಲ ಇದೀಗ 207ಕ್ಕೆ ಬಂದಿದೆ. ಹೀಗಾಗಿ ಬಹುಮತ ಸಾಬೀತು ಪಡೆಸಲು ಬೇಕಾಗಿರೋದು 104. ದೋಸ್ತಿ ಪಡೆ ಬಳಿ 99 ಇದೆ. ಸ್ಪೀಕರ್ ಒಬ್ಬರು, ಒಂದು ಬಿಎಸ್ಪಿ ಸ್ಥಾನವಿದೆ. ಇನ್ನು ಬಿಜೆಪಿ ಪಡೆಯಲ್ಲಿ ಪಕ್ಷೇತರ ಶಾಸಕ ನಾಗೇಶ ಸೇರಿ 106 ಇದೆ. ಹೀಗಾಗಿ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ಇಂದು ಯಾಚಿಸುವ ವಿಶ್ವಾಸ ಮತದಲ್ಲಿ ಗೆಲುವು ಫಿಕ್ಸ್.

ಸ್ಪೀಕರ್ ರಮೇಶಕುಮಾರ ಅವರ ನಿರ್ಧಾರ ಮೈತ್ರಿ ಪಕ್ಷಕ್ಕಿಂತ ಕಮಲ ಟೀಂಗೆ ಹೆಚ್ಚು ಅನುಕೂಲವಾಗಿದೆ. ಹೀಗಿದ್ರೂ ಸುಮ್ನೆ ನಮ್ಮದೊಂದು ಹೇಳಿಕೆ ಇರ್ಲಿ ಅನ್ನೋ ಕಾರಣಕ್ಕೆ ಅನರ್ಹ ಶಾಸಕರ ಪರ ಬ್ಯಾಟ್ ಬೀಸ್ತಿದ್ದಾರೆ. ಇನ್ನು ಇಂದು ಸದನದಲ್ಲಿ ಫೈನಾನ್ಸ್ ಬಿಲ್ ಮಂಡನೆಯಾಗಿ ಜುಲೈ 31ರೊಳಗೆ ರಾಜ್ಯಪಾಲರ ಸಹಿಯಾದ್ರೆ ಎಲ್ಲ ಸರ್ಕಾರಿ ನೌಕರರಿಗೆ ಸಂಬಳ. ಇಲ್ದೇ ಹೋದ್ರೆ ಆಡಳಿತ ಯಂತ್ರ ಸ್ಥಬ್ಧವಾಗಲಿದೆ.


TAG


Leave a Reply

Your email address will not be published. Required fields are marked *

error: Content is protected !!