ಅಕಾಡೆಮಿ, ಪ್ರಾಧಿಕಾರದ ಸ್ಥಾನಗಳಿಗೆ ಕುತ್ತು!

440

ಬೆಂಗಳೂರು: ರಾಜ್ಯದಲ್ಲಿ ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ ಸಾಂಸ್ಕೃತಿಕ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಹುದ್ದೆಗೆ ಕಂಟಕ ಶುರುವಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಯಾಕಂದ್ರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ರಾಜೀನಾಮೆ ಮಾತುಗಳನ್ನ ಆಡಿದಿದ್ದಾರೆ.

ಪ್ರೊ.ಎಸ್.ಜಿ ಸಿದ್ದರಾಮಯ್ಯ

ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗ್ತಿರುವ ಹೊತ್ತಿನಲ್ಲಿ 13 ಅಕಾಡೆಮಿಗಳು ಹಾಗೂ 3 ಪ್ರಾಧಿಕಾರದ ಅಧ್ಯಕ್ಷರ ಅಧಿಕಾರದ ಮೇಲೆ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲ ಸಾಂಸ್ಕೃತಿ ಸಂಸ್ಥೆಗಳ ಹುದ್ದೆಯ ಅಧಿಕಾರ ಮೂರು ವರ್ಷವಿದೆ. ಆದ್ರೆ, ಹಿಂದಿನ ಸರ್ಕಾರಗಳು ನೇಮಕಾತಿ ಪತ್ರದಲ್ಲಿ ಮುಂದಿನ ಆದೇಶ ಬರುವವರೆಗೂ ಅಧಿಕಾರದಲ್ಲಿ ಇರುತ್ತಾರೆ ಅಂತಾ ಹೇಳಲಾಗಿದೆ. ಆದ್ರೆ, ಸರ್ಕಾರಕ್ಕೆ ರಾಜೀನಾಮೆ ಪಡೆದು ಹೊಸಬರನ್ನ ನೇಮಕ ಮಾಡುವ ಅಧಿಕಾರವಿದೆ.

ಅರವಿಂದ ಮಾಲಗತ್ತಿ

ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ನೇಮಕವಾಗಿದ್ದವರಿಂದ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಪಡೆದು, 6 ತಿಂಗಳಲ್ಲಿ ಹೊಸಬರನ್ನ ನೇಮಿಸಿತ್ತು. ಹೀಗಾಗಿ ಬಿಜೆಪಿ ಸರ್ಕಾರ ಇದೆ ಹಾದಿ ಹಿಡಿಯುತ್ತಾ ಅನ್ನೋ ಅನುಮಾನ ಮೂಡಿದೆ. ಆದ್ರೆ, ಅಕಾಡೆಮಿಗಳಿಂದ, ಪ್ರಾಧಿಕಾರಗಳಿಂದ ಪುಸ್ತಕದ ಕೆಲಸಗಳು ನಡೆಯುತ್ತಿದ್ದು, ರಾಜೀನಾಮೆ ಪಡೆಯುವ ಕೆಲಸವಾದ್ರೆ, ಪ್ರಸ್ತುತ ನಡೆಯುತ್ತಿರುವ ಕೆಲಸಗಳಿಗೆ ತೊಂದರೆಯಾಗುತ್ತೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!