ಈ ಪಿಯಾನೋ ನುಡಿಸಲು ಮೂರು ಮಹಡಿ ಹತ್ತಬೇಕು!

440

ನೀವು ಸಣ್ಣಪುಟ್ಟ ಪಿಯಾನೋ ನೋಡಿರ್ತಿರಾ. ಮನೆಯಲ್ಲಿ ಇದಕ್ಕಾಗಿ ಒಂದು ಸಣ್ಣ ಜಾಗವಿದ್ರೆ ಸಾಕು. ಕುಳಿತುಕೊಂಡು ನುಡಿಸಬಹುದು. ಆದ್ರೆ, ನಾವು ಇಂದು ನಿಮ್ಗೆ ಹೇಳಲು ಹೊರಟಿರುವ ಪಿಯಾನೋ ತುಂಬಾ ವಿಶೇಷವಾದದ್ದು. ಇದು ಮನೆಯ ಮೂಲೆಯಲ್ಲಿ ಅಲ್ಲ. ಇದಕ್ಕಾಗಿಯೇ ಒಂದು ಮನೆಬೇಕು.

ದೊಡ್ಡ ವಿಯಾನೋ ಸೃಷ್ಟಿಕರ್ತ ಡೇವಿಡ್ ಕ್ಲಾವಿನ್ಸ್

ಜರ್ಮನ್ ಮೂಲದ ಸಂಗೀತ ಸಂಶೋಧಕ ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆ. ಡೇವಿಡ್ ಕ್ಲಾವಿನ್ಸ್ ಅನ್ನೋ ಸಂಶೋಧಕ ವಿಶ್ವದ ಅತಿ ದೊಡ್ಡ ಪಿಯಾನೋ ನಿರ್ಮಿಸುವ ಮೂಲಕ ತಮ್ಮ ಈ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.

ಜರ್ಮನ್ ನ ಲ್ಯಾಟ್ವಿಯಾದ ಕನ್ಸರ್ಟ್ ಹಾಲ್ ಗೋಡೆಯ ಮೇಲೆ ಎತ್ತರಕ್ಕೆ ಉಕ್ಕಿನಿಂದ ರೆಡಿ ಮಾಡಲಾದ ಪಿಯಾನೋವನ್ನ ಜೋಡಿಸಲಾಗಿದೆ. ಈ ಗ್ರ್ಯಾಂಡ್ ಪಿಯಾನೋ ನೋಡಲು ಪ್ರೇಕ್ಷಕರು ಮೂರನೇ ಮಹಡಿ ಹತ್ತಬೇಕು. ಅಲ್ದೇ ಅದನ್ನ ನುಡಿಸುವವರು ಸಹ ಮೂರನೇ ಮಹಡಿಯ ಬಾಲ್ಕನಿಗೆ ಹೋಗಬೇಕು.

ಇಷ್ಟು ವಿವರ ನೀಡಿದ್ರೆ ಗೊತ್ತಾಗುತ್ತೆ ಅಲ್ವೆ, ಪಿಯಾನೋ ಎಷ್ಟೊಂದು ದೊಡ್ಡದು ಇರಬಹುದು ಅಂತಾ. ಈ ಪಿಯಾನೋ ಸೃಷ್ಟಿಕೃತ ಡೆವಿಡ್ ಕ್ಲಾವಿನ್ಸ್, 1987ರಲ್ಲಿ ಮಾಡೆಲ್ 370 ಅನ್ನೋ ಅತಿ ದೊಡ್ಡ ಪಿಯಾನೋ ನಿರ್ಮಿಸಿ ದಾಖಲೆ ಮಾಡಿದ್ದ. ಇದೀಗ 450ಐ ಅನ್ನೋ ಮಾಡೆಲ್ ಪಿಯಾನೋ ರೆಡಿ ಮಾಡಿದ್ದು ಇದರ ಎತ್ತರ ಬರೋಬ್ಬರಿ 4.5 ಮೀಟರ್ ಇದೆ. ಇದು ಮಾಡೆಲ್ 370 ಪಿಯಾನೋಗಿಂತ ಒಂದು ಮೀಟರ್ ಎತ್ತರವಾಗಿದೆ.

ಒಂದು ಟೇಬಲ್ ಸೈಜಿನಲ್ಲಿರುವ ಪಿಯಾನೋ ನೋಡಿದ ಜನಕ್ಕೆ ಇದನ್ನ ನೋಡಿ ಶಾಕ್ ಆಗಿದೆ. ಕುರ್ಚಿ ಮೇಲೆ ಕುಳಿತು ನುಡಿಸಬೇಕಾದ ಪಿಯಾನೋವನ್ನ ನೋಡಿದ ಜನ, ಮೂರನೇ ಮಹಡಿಯ ಬಾಲ್ಕನಿಗೆ ಹೋಗಿ ನುಡಿಸುವ ಪಿಯಾನೋ ಕಂಡು ಪಿಳಿಪಿಳಿ ಅಂತಾ ಕಣ್ಣು ಬಿಡ್ತಿದ್ದಾರೆ. ಅಲ್ದೇ, ಇದರ ಸೃಷ್ಠಿಕರ್ತ ಡೆವಿಡ್ ಕ್ಲಾವಿನ್ಸ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಅದೇನೆ ಇರ್ಲಿ. ನೀವು ಈ ಪಿಯಾನೋ ನೋಡಬೇಕು ಅಂದ್ರೆ ಜರ್ಮನ್ ಗೆ ತೆರಳಬೇಕು.




Leave a Reply

Your email address will not be published. Required fields are marked *

error: Content is protected !!