ಹೇಗಿದೆ ಪಾರ್ಚುನರ್ ಪ್ರೀಮಿಯಂ ನ್ಯೂ ಕಾರ್

763

ಟೊಯೊಟಾ ಸಂಸ್ಥೆಯ ಪಾರ್ಚುನರ್ ಪ್ರೀಮಿಯಂ ಎಸ್ ಯುವಿ ಕಾರಿನ ಹೊಸ ಮಾದರಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಇದೇ ಸೆಪ್ಟಂಬರ್ ತಿಂಗಳಲ್ಲಿ ಕಾರು ಬಿಡುಗಡೆ ಮಾಡಲು ಟೊಯೊಟಾ ಸಂಸ್ಥೆ ಎಲ್ಲ ರೀತಿಯ ಪ್ಲಾನ್ ಮಾಡಿದೆ. ಇದಕ್ಕೂ ಮೊದ್ಲು ಇಂಡೋನೇಷಿಯಾದಲ್ಲಿ ಪ್ರದರ್ಶನಗೊಂಡಿದೆ.

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಗಾಯ್ ಕಿಂಡೋ ಇಂಡೋನೇಷಿಯಾ ಆಟೋ ಶೋನಲ್ಲಿ ಟೊಯೊಟೋ ಪಾರ್ಚುನರ್ ಟಿಆರ್ ಡಿ ಸ್ಪೋರ್ಟಿವೊ ಕಾರು ಪ್ರದರ್ಶನ ಕಂಡಿದೆ. ಭಾರತದಲ್ಲಿ ಐಷಾರಾಮಿ ಕಾರುಗಳಲ್ಲಿ ಹೆಚ್ಚು ಮಾರಾಟವಾಗ್ತಿರುವ ಕಾರುಗಳಲ್ಲಿ ಪಾರ್ಚುನರ್ ಸರಣಿಯ ಕಾರುಗಳು ಇವೆ.

ಈಗಾಗ್ಲೇ ಥೈಲಾಂಡ್ ನಲ್ಲಿ ಈ ಕಾರು ಮಾರಾಟವಾಗ್ತಿದ್ದು, ಒಂದಿಷ್ಟು ಬದಲಾವಣೆಯ ಮೂಲಕ ಭಾರತಕ್ಕೆ ಬರ್ತಿದೆ. ಹೀಗಾಗಿ ಸೆಪ್ಟಂಬರ್ ತಿಂಗಳಲ್ಲಿ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿದೆ.




Leave a Reply

Your email address will not be published. Required fields are marked *

error: Content is protected !!