ಬಿಎಸ್ಎನ್ಎಲ್ ಹೊಸ ನಾಲ್ಕು ಆಫರ್

522

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಖಾಸಗಿ ಟೆಲಿಕಾಂ ಸಂಸ್ಥೆಗಳು ಭರ್ಜರಿ ಪೈಪೋಟಿ ನಡೆಸಿದ್ದು, ಜನರ ಜೇಬಿಗೆ ದಿನದಿಂದ ದಿನಕ್ಕೆ ಕತ್ತರಿ ಹಾಕುತ್ತಿವೆ. ಇದರಿ ಪರಿಣಾಮ ಮೊಬೈಲ್ ಕರೆನ್ಸಿ ಹಾಕಿ ಹಾಕಿ ಸಾಕಾಗುತ್ತಿದೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಾಲ್ಕು ಹೊಸ ಆಫರ್ ಗಳನ್ನು ನೀಡಿದೆ.

184, 185, 186 ಹಾಗೂ 347 ರೂಪಾಯಿ ನಾಲ್ಕು ಆಫರ್ ನೀಡಿದೆ. 184 ರೂಪಾಯಿಗೆ ಪ್ರತಿ ದಿನ 1 ಜಿಬಿ ಡೇಟಾ, 100 ಎಸ್ಎಂಎಸ್, ಅನ್ ಲಿಮಿಟೆಡ್ ಕಾಲ್ಸ್ 28 ದಿನಗಳ ತನಕ. ಇರಲಿದೆ. ಇದು 185, 186ಕ್ಕೂ ಅನ್ವಯವಾಗುತ್ತೆ. ಇದರಲ್ಲಿ ಒಂದಿಷ್ಟು ಹೆಚ್ಚುವರಿ ಅವಕಾಶಗಳಿವೆ. ಇನ್ನು 347 ರೂಪಾಯಿಗೆ ಪ್ರತಿ ದಿನ 2 ಜಿಬಿ ಡೇಟಾ, 100 ಎಸ್ಎಂಎಸ್ ಹಾಗೂ ಅನ್ ಲಿಮಿಟೆಡ್ ಕಾಲ್ಸ್ 56 ದಿನಗಳವರೆಗೆ.

ಇಷ್ಟೇ ಡೇಟಾ, ಕಾಲ್ಸ್ ಗೆ ಖಾಸಗಿ ಟೆಲಿಕಾಂಗಳು 600 ರೂಪಾಯಿ ವರೆಗೂ ಚಾರ್ಜ್ ಮಾಡುತ್ತಿವೆ. ಇದರಿಂದಾಗಿ ಗ್ರಾಹಕರಿಗೆ ಭಾರಿ ಪೆಟ್ಟು ಬೀಳುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ ಎನ್ನುತ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!