ಪಾಕಿಸ್ಥಾನದಲ್ಲಿ ಬುದ್ಧ ವಿಗ್ರಹ ಪತ್ತೆ: ಮೌಲ್ವಿ ಮೇರೆಗೆ ನಾಶ

373

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ಲಾಮಾಬಾದ್: ಇಸ್ಲಾಂ ವಿರೋಧಿಯಾಗಿದೆ ಎಂದು ಮೌಲ್ವಿಯೊಬ್ಬರು ಹೇಳಿದ ಕಾರಣಕ್ಕೆ, ಪುರಾತನ ಬುದ್ಧ ವಿಗ್ರಹ ನಾಶ ಪಡಿಸಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ. ಖೈಬರ್ ಪ್ರಾಂತ್ಯದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಗುಂಡಿ ತೋಡುವಾಗ ಸುಮಾರು 1,800 ವರ್ಷಗಳ ಪುರಾತನ ಬುದ್ಧ ವಿಗ್ರಹ ಪತ್ತೆಯಾಗಿದೆ.

ವಿಗ್ರಹದ ಕುರಿತು ಪುರಾತತ್ವ ಇಲಾಖೆಗೆ ತಿಳಿಸುವ ಮೊದ್ಲೇ, ಮೌಲ್ವಿ ನೀಡಿದ ಸೂಚನೆ ಮೇರೆಗೆ ಸ್ಥಳೀಯರು ವಿಗ್ರಹವನ್ನ ಒಡೆದು ಹಾಕಿದ್ದಾರೆ. ಈ ಪ್ರಕರಣ ಗಂಭೀರವಾಗಿದ್ದು, ಆರೋಪಿಗಳನ್ನ ಬಂಧಿಸುವುದಾಗಿ ಪುರಾತತ್ವ ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.

ಪತ್ತೆಯಾದ ಬುದ್ಧನ ವಿಗ್ರಹ 5 ರಿಂದ 6 ಅಡಿ ಎತ್ತರ, ಗಾಂಧಾರ ನಾಗರೀಕತೆಗೆ ಸೇರಿದ್ದು ಕಾರ್ಬನ್ ಡೇಟಿಂಗ್ ಪ್ರಕಾರ ಸುಮಾರ 1,800 ವರ್ಷಗಳ ಹಿಂದನದು ಎನ್ನಲಾಗ್ತಿದೆ. ಖೈಬರ್ ಪ್ರದೇಶ ಈ ಹಿಂದೆ ಗಾಂಧಾರ ಆಗಿತ್ತು. ಇದು ಬೌದ್ಧರ ಪವಿತ್ರ ಸ್ಥಳವಾಗಿತ್ತು ಎನ್ನಲಾಗ್ತಿದೆ. ಇದೆ ಪ್ರದೇಶದ ಹರಿಪುಟ್ ಜಿಲ್ಲೆಯಲ್ಲಿ 2017ರಲ್ಲಿ 2 ಬುದ್ಧ ವಿಗ್ರಹಗಳು ಪತ್ತೆಯಾಗಿದ್ವು.




Leave a Reply

Your email address will not be published. Required fields are marked *

error: Content is protected !!