ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ ಜೊತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸ್ಕೀನ್ ಶೇರ್ ಮಾಡ್ತಿದ್ದಾಳೆ. ಈ ಕುರಿತು ಸಿನಿಮಾ ಮಾಡ್ತಿರುವ, ವೈಜಯಂತಿ ಮೋವಿಸ್ ಟ್ವೀಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ.
ತೆಲುಗು ಸಿನಿ ದುನಿಯಾದ ಹೆಸರಾಂತ ನಿರ್ಮಾಣ ಸಂಸ್ಥೆಯಾಗಿರುವ ವೈಜಯಂತಿ ಮೋವಿಸ್, ತನ್ನ 50ನೇ ವರ್ಷವನ್ನ ಆಚರಣೆ ಮಾಡ್ತಿದೆ. ಈ ಸಂಸ್ಥೆ ಪ್ರಭಾಸ ಚಿತ್ರ ನಿರ್ಮಾಣ ಮಾಡ್ತಿದೆ. ಸಧ್ಯಕ್ಕೆ ಪ್ರಭಾಸ 21 ಎಂದು ಟೈಟಲ್ ಇಡಲಾಗಿದೆ.
‘ಮಹಾನಟಿ’ ಅನ್ನೋ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ ನಾಗ ಅಶ್ವಿನ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಹೈಬಜೆಟ್ ಮೂವಿ ಬಗ್ಗೆ ಪ್ರಭಾಸ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.