ಬಜೆಟ್ ಅಧಿವೇಶನ: ರಾಜ್ಯಪಾಲರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ

218

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಉಭಯ ಸದನಗಳ ಅಧಿವೇಶನ ಉದ್ದೇಶಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದ್ದು, ಅವರ ಭಾಷಣದ ಪ್ರಮುಖ ಅಂಶಗಳು ಈ ರೀತಿ ಇವೆ.

ಅಧಿವೇಶನದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿದ ಅವರು, ತಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಎಂದರು. ರಾಜ್ಯ ಸರ್ಕಾರ ಕಾರ್ಮಿಕರ, ಬಡವರ, ರೈತರ, ಅವಕಾಶ ವಂಚಿತರ ಪರವಾಗಿ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಕೂಡಿಕೊಂಡು ಕೆಲಸ ಮಾಡುತ್ತಿದೆ. ರೈತರ ಪರವಾಗಿ ತಂದಂತಹ ಕೃಷಿ ಕಾರ್ಮಿಕರು, ರೈತ ವಿದ್ಯಾನಿಧಿಯು ನೇಕಾರರು ಸೇರಿ ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ.

ನಮ್ಮ ಕ್ಲಿನಿಕ್, ಮಹಿಳಾ ಸ್ವಾಸ್ಥ್ಯ ಕೇಂದ್ರಗಳು, ಉನ್ನತೀಕರಿಸಿದ ತಾಲೂಕು, ಜಿಲ್ಲಾ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪಟ್ಟಿ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆಯ ಅಡಿಯಲ್ಲಿ ಮಾಡಿರುವ ಮನೆಗಳ ಮಂಜೂರಿ ಪಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ನೀಡಲಾಗುತ್ತಿರುವ ಗೌರವ ಧನ ಹೆಚ್ಚಳ, ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಸೌಲಭ್ಯ ಒದಗಿಸಿರುವ ಕುರಿತು ಮಾತನಾಡಿದರು.

ಹೀಗೆ ರಾಜ್ಯ ಸರ್ಕಾರದ ಸಾಲು ಸಾಲು ಯೋಜನೆಗಳ ಕುರಿತು ಮಾಡಿದ ಭಾಷಣ ಒಂದು ರೀತಿಯಲ್ಲಿ 2023ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ ಎಂದು ವಿಪಕ್ಷಗಳ ಶಾಸಕರು ಮಾತನಾಡಿದರು. ರಾಜ್ಯಪಾಲರ ಭಾಷಣದ ಮೇಲಿನ ಮಾತುಕತೆ ವೇಳೆ ವಿಪಕ್ಷಗಳು ಯಾವ ರೀತಿ ವಾಗ್ದಾಳಿ ನಡೆಸುತ್ತವೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!