ಸಿಂದಗಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

542

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನ ಸರಳವಾಗಿ ಆಚರಿಸಲಾಯ್ತು. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮೇಲಿಂದ ಮೇಲೆ ಉಂಟಾಗ್ತಿರುವ ಹಿನ್ನೆಲೆಯಲ್ಲಿ, ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಜಯಂತಿ ಆಚರಣೆ ಮಾಡಲಾಯ್ತು.

ಜಾಹೀರಾತು

ತಹಶೀಲ್ದಾರ್ ಬಿ.ಎಸ್ ಕಡಬಾವಿ ನೇತೃತ್ವದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪಿಎಸ್ಐ ಸಂಗಮೇಶ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಸೈಯದ ಅಹ್ಮದ, ಶಿರಸ್ತೇದಾರರಾದ ಸಿ ಬಿ ಬಾಬಾನಗರ, ಕೆ ವಿ ಜಾಡರ, ಸುರೇಶ ಮ್ಯಾಗೇರಿ, ಆಹಾರ ಶಿರಸ್ತೇದಾರ್ ಐ ಎಂ.ಮಕಾನದಾರ, ಕಂದಾಯ ನಿರೀಕ್ಷಕ ಜಿ ಎಸ್ ಸೋಮನಾಯಕ, ಸಮಾಜದ ಅಧ್ಯಕ್ಷರಾದ ಎಸ್ ಎಮ್ ಯಳಮೇಲಿ, ಮುಖಂಡಾರ ದಾನಪ್ಪಗೌಡ ಚನಗೊಂಡ, ಚಂದ್ರಶೇಖರ ದೇವರಡ್ಡಿ, ಚಂದ್ರುಗೌಡ ಪಾಟೀಲ, ಶಿವಪ್ಪಗೌಡ ಬಿರಾದಾರ, ನಿಂಗಣ್ಣ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!