ಸಿಎಂ ಸಂಪುಟ ಸಭೆಯ ಮಹತ್ವದ ನಿರ್ಣಯಗಳ ಹೈಲೈಟ್ಸ್

451

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಮಹತ್ವದ ನಿರ್ಣಯಗಳಿಗೆ ಅನುಮೋದನೆ ಸಕ್ಕಿದೆ. ಯಾವೆಲ್ಲ ವಿಚಾರಗಳಿಗೆ ಅನುಮೋದನೆ ಸಿಕ್ಕಿದೆ ಅನ್ನೋದರ ಹೈಲೈಟ್ಸ್ ಇಲ್ಲಿದೆ.

ಕೃಷಿ ಅಭಿವೃದ್ಧಿ ನಿಗಮ ಮಂಡಳಿಗೆ 400 ಕೋಟಿ ನೀಡಲು ಒಪ್ಪಿಗೆ

ರಸಗೊಬ್ಬರ ದಾಸ್ತಾನಿಗೆ 400 ಕೋಟಿ ಸಾಲದ ಶ್ಯೂರಿಟಿ

ಅರಸು ಅಭಿವೃದ್ಧಿ ನಿಗಮ ಮಂಡಳಿಗೆ 500 ಕೋಟಿ, 550 ಕೋಟಿ ಹೆಚ್ಚುವರಿ

ಸಿರಿಗಂಧ ಕಿಟ್ ಖರೀದಿಗೆ 18.62 ಕೋಟಿ ವೆಚ್ಚಕ್ಕೆ ಗ್ರೀನ್ ಸಿಗ್ನಲ್

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ಸೋಪ್ ಕಿಟ್ ಖರೀದಿ

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕ್ಯಾಲ್ಸಿಯಂ ಮಾತ್ರೆ ಖರೀದಿಗೆ 14.37 ಕೋಟಿ

ಜಾಹೀರಾತು

ಬೆಂಗಳೂರಿನಲ್ಲಿ ಕೆಎಸ್ಆರ್ ಪಿ ಜಾಗದಲ್ಲಿ ಗುಪ್ತ ವಾರ್ತೆ ಕಟ್ಟಡಕ್ಕೆ ಒಪ್ಪಿಗೆ

ಬೆಳಗಾವಿ ಕಮಿಷನರೇಟ್ ಹೊಸ ಕಟ್ಟಡಕ್ಕೆ 17 ಕೋಟಿ ವೆಚ್ಚದ ಯೋಜನೆಗೆ ಅಸ್ತು

ದೇವದುರ್ಗದಲ್ಲಿ ಮೂಲಸೌಕರ್ಯ ಕಲ್ಪಿಸಲು 92 ಕೋಟಿ ಅನುದಾನ

19.08 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಹೊನ್ನಳ್ಳಿ ಉಪ ವಿಭಾಗ ಮಾಡಿ ಮೇಲ್ದರ್ಜೆಗೆ ಏರಿಕೆ ಮಾಡುವ ತೀರ್ಮಾನ

ಕರ್ನಾಟಕ ರಾಜ್ಯ ಭಾಷಾ ನಿಯಮಕ್ಕೆ ತಿದ್ದುಪಡಿ

ಷೇರು ಮೂಲಕ ಬಂಡವಾಳ ಕ್ರೂಡೀಕರಣಕ್ಕೆ ಅನುಮತಿ

ಹೀಗೆ ಹಲವು ಪ್ರಮುಖ ನಿರ್ಣಯಗಳಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಾನೂನು ಸಚಿವ ಜಿ.ಮಾಧುಸ್ವಾಮಿ ಮಾಹಿತಿ ನೀಡಿದ್ರು. ಇನ್ನು ನೆರೆ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತ್ನಾಡಿದ ಸಚಿವರು, ಈ ತಿಂಗಳಾಂತ್ಯಕ್ಕೆ ವರದಿ ಸಲ್ಲಿಸಲು ಸೂಚನೆ ಬಂದಿದೆ. ವಾರದೊಳಗೆ ವರದಿ ಸಲ್ಲಿಸುತ್ತೇವೆ. ವರದಿ ಸಲ್ಲಿಕೆ ಬಳಿಕ ನೆರವು ಬರಬೇಕು. ನಾಳೆಯಿಂದ ಸಚಿವರ ಪ್ರವಾಹ ಪೀಡಿತ ಸ್ಥಳಗಳಿಗೆ ಹೋಗುತ್ತೇವೆ. ಪರಿಹಾರ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸುತ್ತೇವೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!