ಅಸ್ಸಾಂ ಮಾಜಿ ಸಿಎಂ ಗೊಗೊಯಿ ನಿಧನ

259

ಪ್ರಜಾಸ್ತ್ರ ಸುದ್ದಿ

ಗುವಾಹಟಿ: ಅಸ್ಸಾ ಮಾಜಿ ಸಿಎಂ ತರುಣ ಗೊಗೊಯಿ ನಿಧನರಾಗಿದ್ದಾರೆ. 84 ವರ್ಷದ ಸೋಮವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ 19 ಸೋಂಕು ಕಾಣಿಸಿಕೊಂಡ ಪರಿಣಾಮ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ರು. ಅವರ ಸ್ಥಿತಿ ಇಂದು ಚಿಂತಾಜನಕವಾಗಿದೆ ಎಂದು ಹೇಳಲಾಗಿತ್ತು. ಅವರ ಮೃತದೇಹವನ್ನ ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿರಸಲಾಗುವುದು ಹಾಗೂ ಮಂಗಳವಾರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.

3 ಬಾರಿ ಸಿಎಂ, 2 ಬಾರಿ ಕೇಂದ್ರ ಸಚಿವ, 2 ಬಾರಿ ಸಂಸದರಾಗಿದ್ದ ತರುಣ ಗೊಗೊಯಿ ಅವರು 2001ರಿಂದ ತಿರಬೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗ್ತಾ ಬರ್ತಿದ್ರು. ಗೊಗೊಯಿ ನಿಧನಕ್ಕೆ ರಾಷ್ಟ್ರೀಯ ನಾಯಕರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!