ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು ಇಲ್ಲವೆ…

122

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬರೋಬ್ಬರಿ 36 ವಿಷಯಗಳ ಕುರಿತು ಚರ್ಚಿಸಲಾಗಿದೆ.

ಸಿವಿಲ್ ಸೇವೆ ನೇಮಕಾತಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಕ್ರೀಡಾಪಟುಗಳಿಗೆ ಶೇಕಡ 2ರಷ್ಟು ನೇರ ನೇಮಕಾತಿಗೆ ಅವಕಾಶ. ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ 47.32 ಕೋಟಿ ರೂಪಾಯಿ ವೆಚ್ಚದಲ್ಲಿ ಜಿನೋಮ್ ಅಧ್ಯಯನ ಸಂಸ್ಥೆ ಸ್ಥಾಪನೆಗೆ ಅನುಮೋದನೆ, 11 ಮಹಾನಗರ, 24 ನಗರಸಭೆಗಳಲ್ಲಿ ಚೀತಾಗಾರ ನಿರ್ಮಾಣಕ್ಕಾಗಿ 126 ಕೋಟಿಗೆ ಅನುಮೋದನೆ, ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಿರುವ ಮೇಲ್ಸೇತುವೆಗೆ 263 ಕೋಟಿ ವೆಚ್ಚಕ್ಕೆ ಗ್ರೀನ್ ಸಿಗ್ನಲ್.

ರಾಜ್ಯದ 6 ಜಿಲ್ಲೆಗಳಲ್ಲಿ 65 ಕೋಟಿ ವೆಚ್ಚದಲ್ಲಿ ಶಿಥಲೀಕರಣ ಘಟಕ ಸ್ಥಾಪನೆ, 49.90 ಕೋಟಿ ವೆಚ್ಚದಲ್ಲಿ ರಾಜೀವ್ ಆರೋಗ್ಯ ವಿಶ್ವವಿದ್ಯಾಲಯ ಪ್ರಾದೇಶಿಕ ಸಂಸ್ಥೆ ನಿರ್ಮಾಣಕ್ಕೆ ಅನುಮೋದನೆ. ಬೆಳಗಾವಿ, ಕಲಬುರಗಿಯಲ್ಲಿ ಸುಟ್ಟ ಗಾಯದ ಆಸ್ಪತ್ರೆ ನಿರ್ಮಾಣ, 100 ಕೋಟಿ ವೆಚ್ಚದಲ್ಲಿ 6 ಕೈಗಾರಿಕ ಸಂಸ್ಥೆಗಳ ಉನ್ನತೀಕರಣ. ತುಂಗಭದ್ರಾ ನದಿಗೆ ಬ್ರಿಡ್ಜ್ ಜೊತೆಗೆ ಬ್ಯಾರೇಜ್ ನಿರ್ಮಾಣ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 61 ಕೆರೆಗಳಿಗೆ ಘಟಪ್ರಭಾ ನದಿಯಿಂದ ನೀರು ಪೂರೈಕೆ. ಇದಕ್ಕೆ 519 ಕೋಟಿ ವೆಚ್ಚ ಜೊತೆಗೆ ಬೆಳಗಾವಿ ತಾಲೂಕಿನ 20 ಕೆರೆಗಳಿಗೆ ನೀರುವ ತುಂಬಿಸುವ ಯೋಜನೆಗೆ ಒಪ್ಪಿಗೆ. ಇದಕ್ಕೆ 287 ಕೋಟಿ ವೆಚ್ಚ.

26.84 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ, ಕಲಿಕಾ ಕಾರ್ಯಕ್ರಮಕ್ಕೆ 9 ಕೋಟಿ, 84 ಶಾಲೆಗಳಿಗೆ ಕಲಿಕಾ ಕಟ್ಟಡಕ್ಕಾಗಿ 24 ಕೋಟಿ ಅನುಮೋದನೆ. ಹೀಗೆ ಬರೋಬ್ಬರಿ 36 ವಿಚಾರಗಳ ಕುರಿತು ಚರ್ಚಿಸಿ ಒಪ್ಪಿಗೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!