ಜೂ.1ಕ್ಕೆ ಸಚಿವ ಸಂಪುಟ ಸಭೆ: ಅಂದೇ ಗ್ಯಾರೆಂಟಿಗಳ ಜಾರಿ ಸಾಧ್ಯತೆ!

109

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚುನಾವಣೆಪೂರ್ವದಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ 5 ಗ್ಯಾರೆಂಟಿಗಳನ್ನು ಭರವಸೆ ನೀಡಿದೆ. ಈಗ ಕಾಂಗ್ರೆಸ್ ಸರ್ಕಾರಿ ಬಂದಿದೆ. ಹೀಗಾಗಿ ಎಲ್ಲರ ಪ್ರಶ್ನೆ ಒಂದೇ, ಐದು ಗ್ಯಾರೆಂಟಿಗಳು ಜಾರಿಗೆ ಬರುವುದು ಯಾವಾಗ ಎಂದು? ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಅಂದೇ ಐದು ಗ್ಯಾರೆಂಟಿಗಳು ಜಾರಿಗೆ ಬರುವ ಸಾಧ್ಯತೆಗಳಿವೆ.

ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ಯಾರೆಂಟಿ ಜಾರಿಗೆ ಎಷ್ಟು ಹಣ ಬೇಕು? ಹೇಗೆ ಜಾರಿಗೆ ಇರಬೇಕು? ಮಹಿಳೆಯರಿಗೆ 2 ಸಾವಿರ ನೀಡುವ ಕುರಿತು ಅಂಕಿಸಂಖ್ಯೆ ಕಲೆ ಹಾಕುವುದು ಸೇರಿದಂತೆ ಪ್ರತಿಯೊಂದರ ಮಾಹಿತಿ ಸಂಗ್ರಹಕ್ಕೆ ಸೂಚಿಸಲಾಗಿದೆ. ಈ ಕೆಳಗಿನ ಐದು ಗ್ಯಾರೆಂಟಿಗಳನ್ನು ಕಾಂಗ್ರೆಸ್ ಭರವಸೆ ನೀಡಿದೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ.

ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್.

ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಉಚಿತ.

ಯುವನಿಧಿ ಯೋಜನೆ ಅಡಿಯಲ್ಲಿ ನಿರುದ್ಯೋಗ ಪದವಿಧರರಿಗೆ 3000 ಹಾಗೂ ಡಿಪ್ಲೋಮಾ ಮಾಡಿದವರಿಗೆ 1,500 ರೂಪಾಯಿ 2 ವರ್ಷದ ತನಕ ನೀಡುವುದು.

ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ




Leave a Reply

Your email address will not be published. Required fields are marked *

error: Content is protected !!