ಕ್ಯಾಲಿಫೋರ್ನಿಯಾದಲ್ಲಿ ಭಾರಿ ಕಾಡ್ಗಿಚ್ಚು

303

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕ್ಯಾಲಿಫೋರ್ನಿಯಾ: ಸ್ಯಾಕ್ರಮೆಂಟೋದ ಉತ್ತರದಲ್ಲಿ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಸಾವಿರಾರು ಮನೆಗಳು ಹಾಗೂ ಕಟ್ಟಡಗಳು ಅಪಾಯದಲ್ಲಿ ಸಿಲುಕಿವೆ ಎಂದು ಹೇಳಲಾಗ್ತಿದೆ.

ಈ ಕಾಡ್ಗಿಚ್ಚು ಕಳೆದ ಮೂರು ವಾರಗಳಿಂದ ಹರಡುತ್ತಿದೆ. ಗಾಳಿಯಿಂದಾಗಿ ಹೆಚ್ಚಿಗೆ ವ್ಯಾಪಿಸಿದೆ ಎನ್ನಲಾಗ್ತಿದೆ. ಸುಮಾರು 40 ಕಿಲೋ ಮೀಟರ್ ವರೆಗೂ ವ್ಯಾಪಿಸಿ ಅಪಾರ ಪ್ರಮಾಣದ ನಷ್ಟವಾಗಿದೆ. ಈಗಾಗ್ಲೇ ಸಾವಿರಾರು ಜನರನ್ನ ಸ್ಥಳಾಂತರಿಸಲಾಗಿದೆ.

ಬಿಬಿಸಿ ಫೋಟೋ

ಅಲ್ದೇ, ಈ ಬೆಂಕಿ ಮುಂದಿನ 24 ಗಂಟೆಯಲ್ಲಿ ಬರೋಬ್ಬರಿ 1,036 ಕಿಲೋ ಮೀಟರ್ ಹರಡಲಿದೆ ಎಂದು ಎಚ್ಚರಿಸಲಾಗಿದೆ. ಕಾಡ್ಗಿಚ್ಚಿನಿಂದಾಗಿ ನಗರದ ತುಂಬಾ ಹೊಗೆ ಆವರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!