ವಾಯುಪಡೆಗೆ ರಫೇಲ್ ಸೇರ್ಪಡೆ: ಸರ್ವಧರ್ಮ ಪೂಜೆ

342

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ ಜುಲೈ 29ರಂದು ಭಾರತಕ್ಕೆ ಆಗಮಿಸಿದ 5 ರಫೇಲ್ ಯುದ್ಧ ವಿಮಾನಗಳು ಇಂದು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. ಹೀಗಾಗಿ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಅಧಿಕಾರಿಗಳ ಜೊತೆ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದಾರೆ.

ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಪೂಜೆ ಕಾರ್ಯಕ್ರಮದಲ್ಲಿ ಸರ್ವಧರ್ಮ ಪೂಜೆ ನಡೆಯಲಿದೆಯಂತೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫ್ರಾನ್ಸ್ ನಿಂದ ಭಾರತ 36 ಯುದ್ಧ ವಿಮಾನಗಳ ಒಪ್ಪಂದ ಮಾಡಿಕೊಂಡಿದೆ. ಈಗ 5 ಬಂದಿದ್ದು, ನವೆಂಬರ್ ನಲ್ಲಿ 5-10 ರಫೇಲ್ ಬರುವ ಸಾಧ್ಯತೆಯಿವೆ.




Leave a Reply

Your email address will not be published. Required fields are marked *

error: Content is protected !!