ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತಮಿಳು, ತೆಲುಗು, ಹಿಂದಿ ಸೇರಿದಂತೆ ಕನ್ನಡದಲ್ಲಿ ಸುದೀಪ ಜೊತೆ ನಟಿಸಿರುವ ನಟಿ ಸಮೀರಾ ರೆಡ್ಡಿ, ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದಾರೆ. ಆ ದಿನಗಳನ್ನು ನೆನಪು ಮಾಡಿಕೊಂಡರೆ ಕೋಪ ನೆತ್ತಿಗೇರುತ್ತೆ ಎಂದಿದ್ದಾರೆ.
ಬಾಲಿವುಡ್ ಸಿನಿಮಾವೊಂದರ ಶೂಟಿಂಗ್ ಟೈಂನಲ್ಲಿ ಸ್ಕ್ರಿಪ್ಟ್ ನಲ್ಲಿ ಕಿಸ್ಸಿಂಗ್ ಸೀನ್ ಇರ್ಲಿಲ್ಲ. ಆದ್ರೆ, ಹೀರೋನ ಆದೇಶದಂತೆ ನಿರ್ದೇಶಕರು ಕಸ್ಸಿಂಗ್ ಸೀನ್ ಸೇರಿಸಿದ್ರು. ನಾನು ಮಾಡಲ್ಲ ಅಂತಾ ಹೇಳಿದೆ. ಮುಸಾಫಿರ್ ಚಿತ್ರದಲ್ಲಿ ಈ ರೀತಿ ಮಾಡಿದ್ದೀರಿ. ಹೀಗಾಗಿ ಸೇರಿಸಲಾಗಿದೆ ಎಂದರು. ಅಲ್ದೇ ಹೀರೋ ಕಡೆಯಿಂದಲೂ ಪ್ರಸ್ತಾಪ ಬಂದಿತ್ತು ಎಂದು ಸಮೀರಾ ಹೇಳಿದ್ದಾರೆ.
ನೀನು ಯಾವುದಕ್ಕೂ ಸಹಕರಿಸುತ್ತಿಲ್ಲ. ನೀನು ತುಂಬಾ ಬೋರಿಂಗ್, ಶೂಟಿಂಗ್ ನ್ನ ಫನ್ ತರಾ ತೆಗೆದುಕೊಳ್ಳುತ್ತಿಲ್ಲವೆಂದು ಹೇಳಿದ್ದ ವ್ಯಕ್ತಿ, ನಿನ್ನ ಜೊತೆ ಮುಂದಿನ ಸಿನಿಮಾದಲ್ಲಿ ಮಾಡ್ತಿನೋ ಬಿಡ್ತಿನೋ ಗೊತ್ತಿಲ್ಲ ಎಂದಿದ್ದ. ನಾನು ಆತನ ಜೊತೆ ಮತ್ತೆ ಸಿನಿಮಾ ಮಾಡ್ಲಿಲ್ಲ. ಅದೆ ಕೊನೆ ಚಿತ್ರವೆಂದು ನಟಿ ಸಮೀರಾ ರೆಡ್ಡಿ ಹೇಳಿದ್ದಾರೆ. ಆದ್ರೆ, ಅದ್ಯಾರೋ ಅನ್ನೋದು ಹೇಳಿಲ್ಲ.