ನಟಿ ಮಲ್ಲಿಕಾಗೂ ಕಾಡಿತ್ತು ಕಾಸ್ಟಿಂಗ್ ಕೌಚ್

211

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅಂದರೆ ಸಾಕು ಪಡ್ಡೆ ಹುಡುಗರ ಎದೆ ಬಡಿತ ಜೋರಾಗುತ್ತೆ. ಯಾಕಂದರೆ, ಮರ್ಡರ್, ಕ್ವಾಹಿಶ್ ಚಿತ್ರದಲ್ಲಿನ ಈಕೆಯ ಬೋಲ್ಡ್ ಆಕ್ಟಿಂಗ್ ನಿಂದ ಸಾಕಷ್ಟು ಹೆಸರು ಮಾಡಿದಳು. ಇದರ ಜೊತೆಗೆ ಡ್ಯಾನ್ಸ್ ಮೂಲಕ ಸದ್ದು ಮಾಡಿದ ನಟಿಗೂ ಕೌಸ್ಟಿಂಗ್ ಕೌಚ್ ಕಾಡಿದೆ.

ನಟನೆಗಾಗಿ ನಟರೊಂದಿಗೆ, ನಿರ್ದೇಶಕರೊಂದಿಗೆ, ನಿರ್ಮಾಪಕರೊಂದಿಗೆ ರಾಜಿ ಮಾಡಿಕೊಳ್ಳುವುದು. ಈ ಬಗ್ಗೆ ಸ್ವತಃ ನಟಿ ಮಲ್ಲಿಕಾ ಹೇಳಿದ್ದು, ಮರ್ಡರ್, ಕ್ವಾಹಿಶ್ ಚಿತ್ರದಲ್ಲಿನ ನನ್ನ ಪಾತ್ರ ನೋಡಿದ ಅನೇಕರು ನಿಜ ಜೀವನದಲ್ಲಿಯೂ ನಾನು ಹಾಗೇ ಇದ್ದೇನೆ ಎಂದುಕೊಂಡಿದ್ದರು. ಹೀಗಾಗಿ ಕೆಲವು ನಟರು ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು. ನಾನು ಹೆಸರು ಮಾಡಲು ಬಂದಿದ್ದೇನೆ. ರಾಜಿ ಮಾಡಿಕೊಳ್ಳಲು ಅಲ್ಲ ಎಂದ ಮೇಲೆ ಆ ನಟರು ನನ್ನೊಂದಿಗೆ ಸಿನಿಮಾ ಮಾಡಲಿಲ್ಲವೆಂದು ಹೇಳಿದ್ದಾರೆ.

ಕಾಸ್ಟಿಂಗ್ ಕೌಚ್ ಅನ್ನೋದು ಸಿನಿ ಜಗತ್ತಿನಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತೆ. ಬಹುತೇಕ ನಟಿಯರು ಆರಂಭದ ದಿನಗಳಲ್ಲಿ ಈ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅನೇಕರು ಹೇಳಿದ್ದಾರೆ. ಹಾಲಿವುಡ್ ನಿಂದ ಹಿಡಿದು ಎಲ್ಲೆಡೆ ಮೀ ಟು ಅಭಿಯಾನ ಶುರುವಾಗಿದ್ದೇ ಇದಕ್ಕೊಂದು ದೊಡ್ಡ ಉದಾಹರಣೆ.




Leave a Reply

Your email address will not be published. Required fields are marked *

error: Content is protected !!