ನಯನತಾರಾಗೂ ಕಾಸ್ಟಿಂಗ್ ಕೌಚ್ ಅನುಭವ

151

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಲಯಾಳಂ ಚಿತ್ರದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿ ನಟಿ ನಯನತಾರಾ, ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿಯೂ ಮಿಂಚಿದರು. ಸ್ಟಾರ್ ನಟರ ಜೊತೆಗೆ ನಟಿಸಿ ಸಕ್ಸಸ್ ಚಿತ್ರಗಳನ್ನು ನೀಡಿ ಲೇಡಿ ಸೂಪರ್ ಸ್ಟಾರ್ ಆದರು. ಇಂತಹ ನಟಿಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ.

ತಮ್ಮ ವೃತ್ತಿ ಜೀವನದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿದ್ದಾರೆ. ನಟಿ ನಯನತಾರಾಗೆ ದೊಡ್ಡ ಚಿತ್ರವೊಂದು ಆಫರ್ ನೀಡಲಾಗಿತ್ತಂತೆ. ಅದಕ್ಕೆ ಪ್ರತಿಯಾಗಿ ಅವರು ದೈಹಿಕವಾಗಿ ಸಹಕರಿಸಬೇಕು ಎಂದು ಕೇಳಲಾಗಿತ್ತು ಎಂದು ತಮ್ಮ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ನನಗೆ ನನ್ನ ನಟನಾ ಸಾಮರ್ಥ್ಯದ ಬಗ್ಗೆ ಗೊತ್ತಿದೆ. ಪ್ರಮುಖ ಪಾತ್ರ ನೀಡುವುದಾಗಿ ಹೇಳಿ ನನ್ನಿಂದ ಏನನ್ನೂ ನಿರೀಕ್ಷಿಸಬೇಡಿ ಎಂದು ನಿರ್ದೇಶಕನಿಗೆ ಹೇಳಿದ್ದೆ ಅಂತಾ ಲೇಖನವೊಂದರಲ್ಲಿ ತಿಳಿಸಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಸಪ್ತಪದಿ ತುಳಿದಿರುವ ನಟಿ ಸಧ್ಯ ಶಾರೂಕ್ ಖಾನ್ ನಟನೆಯ ಜವಾನ್ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಮೂಲಕ ಬಾಲಿವುಡ್ ಪ್ರವೇಶವಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ  ಸೇರಿ ಅನೇಕ ಸ್ಟಾರ್ ನಟ, ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!