ಆರೋಗ್ಯ ಇಲಾಖೆಯಿಂದ ನಯನತಾರಾ-ಶಿವನ್ ವಿಚಾರಣೆ

221

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ತಮ್ಮ ಅವಳಿ ಮಕ್ಕಳ ಫೋಟೋವನ್ನು ಹಂಚಿಕೊಂಡು, ನಾವು ತಂದೆ-ತಾಯಿ ಆಗಿದ್ದೇವೆ ಎಂದಿದ್ದಾರೆ. ಮದುವೆಯಾಗಿ ನಾಲ್ಕು ತಿಂಗಳು ಕಳೆದಿವೆ. ಅದ್ಹೇಗೆ ಇವರಿಗೆ ಅವಳಿ ಮಕ್ಕಳು ಎಂದು ಹಲವರು ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ. ಇದೀಗ ಅದು ಆರೋಗ್ಯ ಇಲಾಖೆಯಿಂದ ವಿಚಾರಣೆ ನಡೆಯುವ ಹಂತಕ್ಕೆ ಬಂದಿದೆ.

ಹೌದು, ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದು 2021ರಿಂದ ನಿಷೇಧಿಸಲಾಗಿದೆ. ಇದರ ಜೊತೆಗೆ ಒಂದಿಷ್ಟು ನಿಯಮಗಳನ್ನು ರೂಪಿಸಲಾಗಿದೆ. ಜನವರಿ 25, 2022ರಲ್ಲಿ ಪರಹಿತ ಚಿಂತನೆಯೊಂದಿಗೆ ಬಾಡಿಗೆ ತಾಯ್ತನಕ್ಕೆ ಅವಕಾಶವಿದೆ. ಅಂದರೆ ಮಗು ಹೆತ್ತು ಕೊಡುವವರು ವೈದ್ಯಕೀಯ ಖರ್ಚು ಬಿಟ್ಟರೆ ಬೇರೆ ರೀತಿಯಲ್ಲಿ ಹಣಕಾಸಿನ ಮತ್ತು ಇತರೆ ವ್ಯವಹಾರ ನಡೆಯಬಾರದು.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್, ಬಾಡಿಗೆ ತಾಯ್ತನದ ಜೊತೆಗೆ ನಿಯಮಗಳನ್ನು ಅನುಸರಿಸಲಾಗಿದೆಯೋ ಅಲ್ಲವೋ ಅನ್ನೋದರ ಕುರಿತು ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ನಯನತಾರಾ ಹಾಗೂ ಶಿವನ್ ದಂಪತಿಯ ವಿಚಾರಣೆ ನಡೆಸಲಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!