ಆಗಸ್ಟ್ ನಲ್ಲಿ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’

331

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಆಸ್ಕರ್ ಕೃಷ್ಣ ನಿರ್ದೇಶನದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರ ಆಗಸ್ಟ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಸೆವನ್ ರಾಜ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರ್ತಿದೆ. ಈ ಸಿನಿಮಾದಲ್ಲಿ ಆಸ್ಕರ್ ಕೃಷ್ಣ, ಅಟ್ಟಯ್ಯ ವರ್ಸಸ್ ಹಂದಿಕಾಯೋಳು ಖ್ಯಾತಿಯ ನಟ ಲೋಕೇಂದ್ರ ಸೂರ್ಯ, ಗೌರಿ ನಾಯರ್ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ.

ಗಗನ್ ಕುಮಾರ ಕ್ಯಾಮೆರಾ, ಮರಿಸ್ವಾಮಿ ಎಡಿಟಿಂಗ್ ಮಾಡಿದ್ದಾರೆ. ಅನಂತ್ ಆರ್ಯನ್ ಸಂಗೀತವಿದೆ. ರಾಜೇಶ ಕೃಷ್ಣನ್, ಅನುರಾಧ ಭಟ್, ಸುನಿತಾ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈಗಾಗ್ಲೇ ಸೆನ್ಸಾರ್ ನಿಂದ ಗ್ರೀನ್ ಸಿಕ್ಕಿದ್ದು, ಲಾಕ್ ಡೌನ್ ನಿಂದಾಗಿ ಚಿತ್ರ ತಡವಾಗಿದೆ. ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ ಚಿತ್ರ ತಂಡ.




Leave a Reply

Your email address will not be published. Required fields are marked *

error: Content is protected !!