ಕೆಲ ದಿನಗಳಲ್ಲೇ ಮೋದಿ ಮುಸ್ಲಿಂರ ಟೋಪಿ ಧರಿಸುತ್ತಾರೆ: ದಿಗ್ವಿಜಯ್ ಸಿಂಗ್

180

ಪ್ರಜಾಸ್ತ್ರ ಸುದ್ದಿ

ಇಂದೋರ್: ಪ್ರಧಾನಿ ಮೋದಿ ಕೆಲ ದಿನಗಳಲ್ಲೇ ಮುಸ್ಲಿಂರ ಟೋಪಿ ಧರಿಸುತ್ತಾರೆ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಇಂತಹ ಒತ್ತಡವನ್ನು ಸೃಷ್ಟಿಸಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿ ಸೌದಿ ಅರೇಬಿಯಾ ಹಾಗೂ ಇತರೆ ರಾಷ್ಟ್ರಗಳಲ್ಲಿ ಮುಸ್ಲಿಂರ ಟೋಪಿ ಧರಿಸುತ್ತಾರೆ. ಭಾರತಕ್ಕೆ ಬಂದ ಬಳಿಕ ಅದನ್ನು ತೆಗೆಯುತ್ತಾರೆ. ಆರ್ ಎಸ್ಎಸ್ ನ ಭಾಗವತ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿ ಮದಾರಸ್, ಮಸೀದಿಗೆ ಭೇಟಿ ನೀಡಿದ್ದಾರೆ. ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದಾರೆ ಎಂದರು.

ಮೋಹನ್ ಭಾಗವತ್ ಅವರ ಮಸೀದಿ, ಮದಾರಸ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಪ್ರಧಾನಿ ಮೋದಿ ಮುಸ್ಲಿಂರ ಟೋಪಿ ಧರಿಸಲಿದ್ದಾರೆ. ಭಾರತ್ ಜೋಡೋ ಯಾತ್ರೆ ಶ್ರೀನಗರ ತಲುಪುವುದರೊಳಗೆ ಇನ್ನು ಏನೇನಾಗುತ್ತದೆ ಎಂದು ನೋಡಬಹುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!