ಬೆಳ್ಳಂಬೆಳಗ್ಗೆ ಐಟಿ ಸಿಟಿಯಲ್ಲಿ ಮಧ್ಯಪ್ರದೇಶ ನಾಯಕರ ಹೈಡ್ರಾಮಾ

351

ಬೆಂಗಳೂರು: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಐಟಿ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಇದ್ರಿಂದಾಗಿ ಕಾಂಗ್ರೆಸ್ ನಾಯಕರನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ನಗರದ ಯಲಹಂಕ ಬಳಿಯ ರಮಡ ರೆಸಾರ್ಟ್ ನಲ್ಲಿ ಮಧ್ಯಪ್ರದೇಶ ಬಂಡಾಯ ಶಾಸಕರು ಉಳಿದುಕೊಂಡಿದ್ದಾರೆ. ಇವರ ಮನವೊಲಿಸಲು ಬಂದ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ದಿಗ್ವಿಜಯ ಸಿಂಗ್ ನೇತೃತ್ವದ ಕಾಂಗ್ರೆಸ್ ನಾಯಕರನ್ನ ಒಳಗೆ ಹೋಗಲು ಪೊಲೀಸ್ರು ಬಿಡಲಿಲ್ಲ. ಹೀಗಾಗಿ ಮುಖಂಡರು ಧರಣಿ ನಡೆಸಿದ್ರು. ಇದರ ಪರಿಣಾಮ ಯಲಹಂಕಾ ದೊಡ್ಡಬಳ್ಳಾಪುರ ರಸ್ತೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ನಿಂದ ಕೂಡಿತು. ಇದ್ರಿಂದ ಏನು ಮಾಡಬೇಕು ಎಂದು ತೋಚದ ಪೊಲೀಸ್ರು ಕಾಂಗ್ರೆಸ್ ನಾಯಕರನ್ನ ವಶಕ್ಕೆ ಪಡೆದುಕೊಂಡ್ರು.

ಮಧ್ಯಪ್ರದೇಶದ 21 ಶಾಸಕರು ಕಳೆದ ಕೆಲ ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲ ರಾಜೀನಾಮೆ ನೀಡಿ ಬಂದಿರುವುದ್ರಿಂದ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಇವರ ಮನವೊಲಿಸಲು ಬಂದ ಮಾಜಿ ಸಿಎಂ ಹಾಗೂ ಮುಂಖಡರು ಧರಣಿ ನಡೆಸುವ ಪ್ರಸಂಗ ಬಂದು, ಪೊಲೀಸರ ವಶವಾಗಬೇಕಾಯ್ತು. ಬಳಿಕ ಅವರನ್ನ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಕಾಯ್ತು.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡೆಸಿಕೊಳ್ತಿದೆ. ಪರಿಸ್ಥಿತಿ ನಿಭಾಯಿಸುವುದು ನಮಗೆ ಗೊತ್ತು ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!