ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಡಿ ಬಾಸ್ ನಟನೆಯ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಈಗಿನಿಂದಲೇ ಅಭಿಮಾನಿಗಳು ಹಬ್ಬ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ತೆಲುಗು ಟೀಸರ್ ರಿಲೀಸ್ ಮಾಡಲಾಗಿದೆ.
ಯೆಸ್, ಕನ್ನಡದ ಜೊತೆಗೆ ಏಕಕಾಲದಲ್ಲಿ ಟಾಲಿವುಡ್ ಗೂ ನಟ ದರ್ಶನ ನಟನೆಯ ರಾಬರ್ಟ್ ಎಂಟ್ರಿ ಕೊಡ್ತಿದೆ. ಇದ್ರಿಂದಾಗಿ ಭರ್ಜರಿ ಹವಾ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಟೀಸರ್ ಈಗ ಟಾಲಿವುಡ್ ನಲ್ಲಿ ಧೂಳೆಬ್ಬಿಸ್ತಿದೆ. ಇನ್ನು ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗ್ತಿದೆ.