ಚರಂಡಿ ಸ್ವಚ್ಛತೆಗಿಳಿದ ಉಪನ್ಯಾಸಕರು

494

ಸಿಂದಗಿ: ಪಟ್ಟಣದಲ್ಲಿ ಪುರಸಭೆ ಕಾರ್ಮಿಕರು ನಿಗದಿತವಾಗಿ ಚರಂಡಿಯನ್ನ ಸ್ವಚ್ಛ ಮಾಡದೇ ಇರೋದ್ರಿಂದ ಕಸ, ಕಡ್ಡಿ ತುಂಬಿಕೊಂಡು ಚರಂಡಿಗಳು ಬ್ಲಾಕ್ ಆಗ್ತಿವೆ. ಇದ್ರಿಂದಾಗಿ ಚರಂಡಿಯ ಗಲೀಜು ನೀರು ಮನೆಯೊಳಗೆ ನುಗ್ಗುತ್ತಿವೆ. ಹೀಗಾಗಿ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರೊಫೆಸರ್ ಕಾಲೋನಿಯ ನಾಗರಿಕರು ಸ್ವತಃ ತಾವೇ ಚರಂಡಿ ಸ್ವಚ್ಛಗೊಳಿಸ್ತಿದ್ದಾರೆ.

ಪಟ್ಟಣದ ಪ್ರೊಫೆಸರ್ ಕಾಲೋನಿಯ ಪಶ್ಚಿಮ ಕೊನೆಯ ಮುಖ್ಯರಸ್ತೆಯ ನಿವಾಸಿಯಾದ ಶಂಕರ ಮಳ್ಳಿ ಇವರು ತಮ್ಮ ಮನೆ ಮುಂದಿನ ಚರಂಡಿಯನ್ನ ತಾವೇ ಸ್ವಚ್ಛ ಮಾಡಿಕೊಳ್ತಿದ್ದಾರೆ. ಈ ದೃಶ್ಯವನ್ನ ನೀವು ಈ ವಿಡಿಯೋದಲ್ಲಿ ನೋಡಬಹುದು.

ಇಷ್ಟು ಮಾತ್ರವಲ್ಲದೇ, ಇದೇ ಕಾಲೋನಿಯ ಉಪನ್ಯಾಸಕರಾದ ಹಣಮಶೆಟ್ಟಿ ಎಂ.ಡಿ ಪಾಟೀಲ, ವಿ.ಡಿ ಪಾಟೀಲ, ಸಿದ್ದರಾಮ ಉಪ್ಪಿನ, ಅಮೀರ ಆಲಮೇಲ, ಸಿದ್ದಲಿಂಗಯ್ಯ ಹಿರೇಮಠ, ದೇಸಾಯಿ, ಗೋಳಸಾರ, ಜಿ.ಎಸ್ ಹಡಪದ, ಚನ್ನಪ್ಪ ಕಟ್ಟಿ, ಮೂಲಿಮನಿ ಶಿಕ್ಷಕರು ಸೇರಿದಂತೆ ಸಿಂದಗಿಯ ನಾಗರಿಕರು ಪುರಸಭೆಯ ಕಾರ್ಯಕ್ಕೆ ಬೇಸತ್ತು ಹೋಗಿದ್ದಾರೆ. ಇದ್ರಿಂದಾಗಿ ತಮ್ಮ ಏರಿಯಾದ ಚರಂಡಿಗಳನ್ನ ತಾವೆಲ್ಲರೂ ಸೇರಿ ಸ್ವಚ್ಛಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.


ಚರಂಡಿ ಸ್ವಚ್ಛಗೊಳಸ್ತಿರುವ ಪ್ರೊಫೆಸರ್ ಕಾಲೋನಿ ನಿವಾಸಿ ಶಂಕರ ಮಳ್ಳಿ

TAG


Leave a Reply

Your email address will not be published. Required fields are marked *

error: Content is protected !!