ಭಾರತಕ್ಕೆ ಚೀನಾ ಅಧ್ಯಕ್ಷರ ಆಗಮನ

365

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಕ್ಟೋಬರ್ 11ಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಭಾರತ ಭೇಟಿಗಾಗಿ ಅಕ್ಟೋಬರ್ 11 ಹಾಗೂ 12 ರಂದು ಅನೌಪಚಾರಿಕೆ ಶೃಂಗಸಭೆ ನಡೆಯಲಿದೆ.

ಈ ವೇಳೆ ಭಾರತ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ಮಾತುಕತೆ, ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಎರಡನೇ ದಿನ ಚೆನ್ನೈನ ಮಹಾಬಲಿಪುರಂನಲ್ಲಿದ್ದು ಅನೌಪಚಾರಿಕೆ ಸಭೆ ನಡೆಯಲಿದೆ. ಅಲ್ಲಿಂದ ನೇಪಾಳಕ್ಕೆ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ನಡುವೆ ನಡೆಯುತ್ತಿರುವ ಎರಡನೇ ಅನೌಪಚಾರಿಕ ಸಭೆಯಾಗಿದೆ. ಮೊದಲ ಸಭೆ ಕಳೆದ ವರ್ಷದ ಚೀನಾದ ವುಹಾನ್ ನಲ್ಲಿ ಆಗಿತ್ತು. ಒಟ್ನಲ್ಲಿ ಚೀನಾ ಅಧ್ಯಕ್ಷರ ಭೇಟಿ ವೇಳೆ ಯಾವೆಲ್ಲ ಪ್ರಮುಖ ವಿಷಯಗಳು ಚರ್ಚೆಯಾಗಲಿವೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!