ಅಫಜಲಪುರದಲ್ಲಿ ರಸ್ತೆ ಅಪಘಾತ: ಮಗು ಸೇರಿ ನಾಲ್ವರ ಸಾವು

219

ಪ್ರಜಾಸ್ತ್ರ ಸುದ್ದಿ

ಅಫಜಲಪುರ: ನಗರದ ಹೊರವಲಯದಲ್ಲಿ ಬುಧವಾರ ತಡರಾತ್ರಿ ಲಾರಿ ಹಾಗೂ ಕಮಾಂಡರ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ 5 ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಸಂತೋಷ್ ಗೌಡಗಾಂವ್, ಶಂಕರ್ ಜಳಕಿ, ಸಿದ್ದಮ್ಮ ಜಳಕಿ ಹಾಗೂ ಐದು ವರ್ಷದ ಹುಚ್ಚಪ್ಪ ಮಹಾಂತೇಶ್ ಜಳಕಿ ಮೃತ ದುರ್ದೈವಿಗಳು. ಮಗುವಿನ ತಾಯಿ ಪೂಜಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಡನೊಂದಿಗೆ ಜಗಳವಾಡಿಕೊಂಡ ಪೂಜಾ ಇಂಡಿ ತಾಲೂಕಿನ ಸುರಗಿಹಳ್ಳಿಗೆ ಬಂದಿದ್ದಾಳೆ. ಮಾಡ್ಯಾಳ ಗ್ರಾಮಕ್ಕೆ ಮಗಳನ್ನು ಕರೆದುಕೊಂಡು ಹೋಗಲು ಕುಟುಂಬಸ್ಥರು ಬಂದಿದ್ದಾಗ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!