ತುಮಕೂರು: ಅಪೆಕ್ಸ್ ಬ್ಯಾಂಕ್ ಸೇರಿದಂತೆ ವಿವಿಧ ಜಿಲ್ಲಾ ಸಹಕಾರ ಬ್ಯಾಂಕ್ ಗಳ ಮೂಲಕ 300 ಕೋಟಿ ಸಾಲ ನೀಡಿದ ವಿಚಾರ ಸಂಬಂಧ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಇಂದು ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಸೆಪ್ಟೆಂಬರ್ 24 ರಂದು ಇಡಿ ನೋಟಿಸ್ ಬಂದಿದೆ. ಇಡಿ ಸಹಾಯಕ ನಿರ್ದೇಶಕರು ಮೇಲ್ ಮೂಲಕ ಇಂದು ಬರಲು ಹೇಳಿದ್ದಾರೆ. ಯಾವ ಕೇಸ್, ಯಾವ ದಾಖಲೆ ಏನು ಅನ್ನೋದು ಯಾವುದೇ ಮಾಹಿತಿ ಇಲ್ಲವೆಂದು ರಾಜಣ್ಣ ತಿಳಿಸಿದ್ದಾರೆ. ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಬೆಳಗ್ಗೆ 11 ಗಂಟೆಗೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.