ಸಿರಾಜ್, ಠಾಕೂರ್ ದಾಳಿಗೆ ಆಸೀಸ್ ಕಂಗಾಲು: 294ಕ್ಕೆ ಸರ್ವಪತನ

266

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಆಸೀಸ್ 294 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ವೇಗಿ ಮಹಮ್ಮದ್ ಸಿರಾಜ್ ದಾಳಿಗೆ ಆಸ್ಟ್ರೇಲಿಯಾ ಪಡೆ ನಲುಗಿದೆ. ಇದರೊಂದಿಗೆ ಭಾರತಕ್ಕೆ 327 ರನ್ ಗಳ ಟಾರ್ಗೆಟ್ ನೀಡಲಾಗಿದೆ.

ಹ್ಯಾರಿಸ್ 38, ವಾರ್ನರ್ 48, ಮಾರನ್ಸ್ 25, ಸ್ಮಿತ್ 55, ವಾಡೆ 0, ಗ್ರೀನ್ 37, ಕ್ಯಾಪ್ಟನ್ ಪೈನಿ 27, ಕಮಿನ್ಸ್ 28(ನಾಟೌಟ್), ಸ್ಟ್ರಾಕ್ 1, ಲೇಯಾನ್ 13 ಹಾಗೂ ಹಝಲ್ ವುಡ್ 9 ರನ್ ಬಾರಿಸಿ ಔಟ್ ಆದ್ರು.

ಇನ್ನು ಭಾರತ ಪರ ವೇಗಿ ಮಹಮ್ಮದ್ ಸಿರಾಜ್ 19.5 ಓವರ್ ಗಳಲ್ಲಿ 73 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಸಂಭ್ರಮಿಸಿದ್ರು. ಇನ್ನು ಶ್ರಾದೂಲ್ ಠಾಕೂರ್ ಸಹ 4 ವಿಕೆಟ್ ಪಡೆದು ಮಿಂಚಿದ್ರು. ವಾಸಿಂಗ್ಟನ್ ಸುಂದರ್ 1 ವಿಕೆಟ್ ಪಡೆದ. ಭಾರತಕ್ಕೆ ಇನ್ನೂ ಒಂದೂವರೆ ದಿನ ಟೈಂ ಇದ್ದು 327 ರನ್ ಗಳಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!