ದೇಶದೊಳಗೆ ಚೀನಾ ಗ್ರಾಮ: ರಾಗಾ ವಾಗ್ದಾಳಿ

260

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಅಕ್ರಮವಾಗಿ ಒಂದು ಗ್ರಾಮವನ್ನೇ ನಿರ್ಮಾಣ ಮಾಡಿದೆ. ಈ ವಿಚಾರ ಈಗ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಯುವ ನಾಯಕ, ಸಂಸದ ರಾಹುಲ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದು, ನಾನು ದೇಶದ ತಲೆ ತಗ್ಗಿಸಲು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲ್ ಸಹ ವಾಗ್ದಾಳಿ ನಡೆಸಿದ್ದು, 56 ಇಂಚಿನ ಎದೆ ಎಲ್ಲಿ ಎಂದು ಕೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!