ಈ ಮೂರು ಪಕ್ಷಗಳು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳೆಷ್ಟು?

157

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 13ರಿಂದ ಶುರುವಾಗಿದೆ. ಈಗಾಗ್ಲೇ ಎಲ್ಲ ಪಕ್ಷಗಳು ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಉಳಿಸಿಕೊಂಡಿರುವ ಕ್ಷೇತ್ರಗಳನ್ನು ನೋಡುವುದಾದರೆ ಈ ಕೆಳಗಿನಂತಿವೆ.

ಜೆಡಿಎಸ್ ಮೊದಲು ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರು ಘೋಷಿಸಿತು. ನಂತರ ಕಳೆದ 2 ದಿನಗಳಲ್ಲಿ 56 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಮೂಲಕ 149 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 75 ಕ್ಷೇತ್ರಗಳು ಬಾಕಿ ಇವೆ.

ಇನ್ನು ಕಾಂಗ್ರೆಸ್ ಮೊದಲ ಬಾರಿಗೆ 124 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. ನಂತರ ಕಾದು ನೋಡುವ ತಂತ್ರವನ್ನು ಪಾಲಿಸಿತು. 2ನೇ ಪಟ್ಟಿಯಲ್ಲಿ 42, ಇಂದು ರಿಲೀಸ್ ಮಾಡಿದ 3ನೇ ಪಟ್ಟಿಯಲ್ಲಿ 43 ಹುರಿಯಾಳುಗಳನ್ನು ಘೋಷಿಸಿತು. ಇದರೊಂದಿಗೆ 209 ಕ್ಷೇತ್ರಗಳಿಗೆ ತನ್ನ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿದ್ದು 15 ಕ್ಷೇತ್ರಗಳು ಬಾಕಿ ಉಳಿದಿವೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಹೆಸರುಗಳನ್ನು ಘೋಷಿಸಿತು. ನಂತರ ಒಂದು ದಿನದ ಅಂತರದಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸೂಚಿಸಿತು. ಒಟ್ಟು 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, 12 ಕ್ಷೇತ್ರಗಳು ಬಾಕಿ ಉಳಿದಿವೆ. ಹೀಗೆ ಮೂರು ಪಕ್ಷಗಳು ಇನ್ನು ಸ್ವಲ್ಪ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ.




Leave a Reply

Your email address will not be published. Required fields are marked *

error: Content is protected !!