ರಾಜ್ಯಕ್ಕಿಂದು ಅ’ಮಂಗಳ’ವಾರ: ಬರೋಬ್ಬರಿ 388 ಜನರಲ್ಲಿ ಸೋಂಕು

458

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಇದೀಗ ಬಂದಿದ್ದು ರಾಜ್ಯದಲ್ಲಿ ಬರೋಬ್ಬರಿ 388 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ. ಇಷ್ಟು ದಿನದ ದಾಖಲೆಯನ್ನ ಮುರಿದು ಇಂದು 388 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ರಾಜ್ಯದಲ್ಲಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 1,403 ಆಗಿದೆ. ಇನ್ನು 2,339 ಕೇಸ್ ಚಾಲ್ತಿಯಲ್ಲಿವೆ. ಕರೋನಾಗೆ ಇದುವರೆಗೂ ಬಲಿಯಾದವರ ಸಂಖ್ಯೆ 52 ಆಗಿದೆ.

ಜಿಲ್ಲಾವರು ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಮೊದಲಿದ್ದು ಬರೋಬ್ಬರಿ 150 ಇದೆ. ನಂತರ 100 ಸೋಂಕಿತರು ಕಲಬುರಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ 10, ಹಾಸನ 9, ಬಾಗಲಕೋಟೆ 9, ದಾವಣಗೆರೆ 7, ಯಾದಗಿರಿ 5, ವಿಜಯಪುರ 4, ಮಂಡ್ಯ 4, ಗ್ರಾಮಾಂತರ 3, ತುಮಕೂರು 2, ಚಿಕ್ಕಬಳ್ಳಾಪುರ 2, ಧಾರವಾಡ 2, ಕೋಲಾರ 1, ಹಾವೇರಿ 1 ಸೋಂಕು ಕೇಸ್ ಪತ್ತೆಯಾಗಿದೆ. ಈ ಮೂಲಕ 388 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಇಂದು ರಾಜ್ಯಕ್ಕೆ ಅ’ಮಂಗಳ’ವಾರ ಆಗಿದೆ.




Leave a Reply

Your email address will not be published. Required fields are marked *

error: Content is protected !!