ದ್ವಿತೀಯ ಪಿಯು ಕೊನೆಯ ಪರೀಕ್ಷೆ: ಶಿಕ್ಷಣ ಇಲಾಖೆಯ ಮಹತ್ವದ ಮಾಹಿತಿ

566

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಕೊನೆಯ(ಇಂಗಿಷ್) ಪರೀಕ್ಷೆ ಜೂನ್ 18ರಂದು ನಡೆಸಲಾಗ್ತಿದೆ. ಇದರ ಇದೀಗ ಮತ್ತೊಂದು ಮಹತ್ವದ ಮಾಹಿತಿಯನ್ನ ಶಿಕ್ಷಣ ಇಲಾಖೆ ನೀಡಿದೆ.

ಲಾಕ್ ಡೌನ್ ನಿಂದಾಗಿ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರ ಮಕ್ಕಳು ಊರುಗಳಿಗೆ ತೆರಳಿದ ಪರಿಣಾಮ, ಅವರು ಇದ್ದಲಿಂದಲೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಜೂನ್ 3ರಿಂದ 5ರ ತನಕ ಸಂಬಂಧಿಸಿದ ಕಾಲೇಜುಗಳ ಪ್ರಿನ್ಸಿಪಲ್ ಮೂಲಕ ತಿದ್ದುಪಡಿಗೆ ಅವಕಾಶವಿದೆ.

ರಾಜ್ಯದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನ ಇಂದು ಬಿಡುಗಡೆ ಮಾಡಲಾಗುತ್ತೆ. ಹೊರ ರಾಜ್ಯದ ವಿದ್ಯಾರ್ಥಿಗಳ ಪಟ್ಟಿಯನ್ನ ಜೂನ್ 5ಕ್ಕೆ ಹಾಗೂ ಅಂತಿಮ ಪಟ್ಟಿಯನ್ನ ಜೂನ್ 7ಕ್ಕೆ ಬಿಡುಗಡೆ ಮಾಡಲಾಗುತ್ತೆ ಎಂದು, ಪದವಿ ಪೂರ್ಣ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ. ತಮ್ಮ ಹೆಸರು ಇರುವ ಕಾಪಿ ಪ್ರಿಂಟ್ ಪಡೆದು ಹಂಚಿಕೆಯಾದ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!