ರಾಕ್ ಲೈನ್ ಮಾಲ್ ಗೆ ಬೀಗ ಹಾಕಿದ ಬಿಬಿಎಂಪಿ

159

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಡೆತನದ ರಾಕ್ ಲೈನ್ ಮಾಲ್ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಕರಣ ಸಂಬಂಧ ಬಿಬಿಎಂಪಿ ಮಾಲ್ ಗೆ ಬೀಗ ಹಾಕಿದೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿರುವ ಮಾಲ್ ಬಂದ್ ಮಾಡಲಾಗಿದೆ.

ಕೋಟ್ಯಾಂತರ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದರೂ ಸಹ ಯಾವುದೇ ಉತ್ತರ ಬರದೆ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾಲ್ ಗೆ ಬೀಗ ಹಾಕಿದ್ದಾರೆ.

ಮಾಲ್ ವಿಸ್ತೀರ್ಣ 48, 500 ಚದರ ಅಡಿ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರಂತೆ. ಮಾಲ್ ಇರುವುದು 1 ಲಕ್ಷದ 22 ಸಾವಿರದ 743 ಚದರ್ ಅಡಿ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮೂಲಕ 74 ಸಾವಿರದ 243 ಚದರ್ ಅಡಿಯ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!