ಈ ಊರಿನಲ್ಲಿ 4 ಗಂಟೆ ಮಾತ್ರ ವ್ಯಾಪಾರ

441

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸೋಮವಾರದಿಂದ ಕೇಲವ 4 ಗಂಟೆ ಮಾತ್ರ ವ್ಯಾಪಾರ ವಹಿವಾಟು ಮಾಡಲು ನಿರ್ಧರಿಸಲಾಗಿದೆ. ಮುಂಜಾನೆ 7 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಕರೋನಾ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ, ಜನರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇಂದು ಗ್ರಾಮದ ಪ್ರಮುಖರೆಲ್ಲರೂ ಪ್ರವಾಸಿ ಮಂದಿರಲ್ಲಿ ಸಭೆ ನಡೆಸಿ, ಕೋವಿಡ-19 ಬಗ್ಗೆ ಮುಂಜಾಗ್ರತ ಕ್ರಮವಾಗಿ ಗ್ರಾಮದ ಅಧಿಕಾರಿಗಳು, ಹಿರಿಯರ, ಸಂಘಟಣೆ ಮುಖಂಡರೊಂದಿಗೆ ಸಲಹೆ ಪಡೆದು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಗ್ರಾಮಕ್ಕೆ ಸರ್ಕಾರಿ ಕೆಲಸದ ಸಲುವಾಗಿ ಪರಸ್ಥಳ ದಿಂದ ಆಗಮಿಸುವ ಪ್ರತಿಯೊಬ್ಬರು ಕಡ್ಡಾಯ ಮಾಸ್ಕ ಹಾಗೂ ಸುರಕ್ಷಿತ ಕ್ರಮದಿಂದ ಬರಬೇಕು. ಎಲ್ಲಾ ಸರ್ಕಾರಿ ಕಚೇರಿಗಳು ಸರ್ಕಾರ ನಿಗದಿ ಪಡಿಸಿದ ವೇಳೆಯ ವರೆಗೆ ಪ್ರಾರಂಭವಿರುತ್ತವೆ. ಗ್ರಾಮಕ್ಕೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಯಾರೇ ಬಂದರೂ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ. ಮಾಸ್ಕ್ ಧರಿಸದೆ ಇರುವವರಿಗೆ 100 ರೂಪಾಯಿ ದಂಡ ವಿಧಿಸಲು ಮುಂದಾಗಿದ್ದಾರೆ.

ಈ ವೇಳೆ ಉಪ ತಹಾಶೀಲ್ದಾರ ವಾಯ್.ಎಚ್.ದ್ರಾಕ್ಷಿ, ಪಿಡಿಓ ಗಿರೀಶ ಕಡಕೋಳ, ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ ಹುಗ್ಗಿ, ಡಾ.ಶಿವಾನಂದ ಬಿರಾದಾರ, ಎಎಸ್ಐ ಎನ್.ಟಿ.ದಡ್ಡಿಮನಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!